ಬೆಂಗಳೂರು : ನಕ್ಸಲ್ ವಿಕ್ರಂಗೌಡ ಎನ್‌ಕೌಂಟರ್‌ನಲ್ಲಿ ಹತನಾಗಿರುವ ಬಗ್ಗೆ ಪ್ರಗತಿಪರ ಚಿಂತಕರು ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಕ್ರಂಗೌಡಗೆ ಶರಣಾಗುವಂತೆ ಆದೇಶ ನೀಡಲಾಗಿತ್ತು. ಆದರೆ ಅವರು ಶರಣಾಗಿರಲಿಲ್ಲ. ಹೀಗಾಗಿ ಆತನನ್ನ ಎನ್‌ಕೌಂಟರ್ ಮಾಡಿದ್ದಾರೆ, ಅದಕ್ಕೆ ನೀವು ಪ್ರಶಂಸೆ ವ್ಯಕ್ತಪಡಿಸಬೇಕು ಎನ್ನುವ ಮೂಲಕ ವಿಕ್ರಂ ಗೌಡ ಎನ್ ಕೌಂಟರನ್ನ ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೇ ನಕ್ಸಲ್‌ರನ್ನ ಹಿಡಿಯಲು ಕೇರಳ ಮತ್ತು ನಮ್ಮ ಸರ್ಕಾರ ಬಹುಮಾನ ಘೋಷಿಸಿತ್ತು. ನಕ್ಸಲಿಸಂ ಇರಬೇಕು ಹೋಗಬೇಕೋ ಎಂದು ನೀವೆ ಹೇಳಿ ಎಂದು ಪ್ರಶ್ನಿಸಿದರು.
ಇದೇ ವೇಳೆ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಸಿಎಂ, ನಾಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡುತ್ತೇನೆ, ನಬಾರ್ಡ್ ನಿಂದ ಸಾಲ ಕೋಡೋದು ಕಡಿಮೆ ಮಾಡಿದ್ದಾರೆ. ಕಳೆದ ಸಲ 5600 ಕೋಟಿ ಕೊಟ್ಟಿದ್ದರು.
ಈ ವರ್ಷ 2360 ಕೋಟಿ ಕೊಟ್ಟಿದ್ದಾರೆ, ಸುಮಾರು 58% ಕಡಿಮೆ ಕೊಟ್ಟಿದ್ದಾರೆ, ಅದಕ್ಕೆ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದರು. ಹಾಗೇ ಸಮಯ ಸಿಕ್ಕರೆ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನೂ ಭೇಟಿಯಾಗುವೆ ಎಂದು ತಿಳಿಸಿದರು.
PublicNext
20/11/2024 03:09 pm