ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಜೆಪಿಯಲ್ಲಿ ಮುಗಿಯದ ರಗಳೆ!- ಯತ್ನಾಳ್ ಟೀಂ ವಿರುದ್ಧವಾಗಿ ರೇಣುಕಾಚಾರ್ಯ ಟೀಂ ಪ್ರತ್ಯೇಕ ಸಭೆ

ಬೆಂಗಳೂರು: ವಕ್ಫ್ ಹೋರಾಟ ವಿಜಯೇಂದ್ರ ನೇತೃತ್ವದಲ್ಲಿ ನಡೆಯಬೇಕು, ಪ್ರತ್ಯೇಕ ಹೋರಾಟ ಮಾಡಬಾರದು ಎಂದು ಒತ್ತಾಯಿಸಿ ಬೆಂಗಳೂರಿನ ಸದಾಶಿವನಗರದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ವಿಜಯೇಂದ್ರ ಬೆಂಬಲಿಗರು ಸಭೆ ನಡೆಸಿದ್ದಾರೆ. ಯತ್ನಾಳ್ ಟೀಮ್ ಪ್ರತ್ಯೇಕವಾಗಿ ವಕ್ಫ್ ಹೋರಾಟ ನಡೆಸಬಾರದು ಅಧಿಕೃತವಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಮಾಡಿರುವ ತಂಡದ ನೇತೃತ್ವದಲ್ಲಿ ವಕ್ಫ್ ಹೋರಾಟ ನಡೆಸಲಿ ಎಂದು ಸಭೆ ನಡೆಸಿದ್ದಾರೆ.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಮಾಜಿ ಸಚಿವರಾದ ರೇಣುಕಾಚಾರ್ಯ, ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ರೂಪಾಲಿ ನಾಯಕ, ಸುನೀಲ್ ನಾಯ್ಕ್, ಸುನೀಲ್ ಹೆಗಡೆ, ವೈ. ಸಂಪಂಗಿ, ಎಸ್ ಕೆ ಬೆಳ್ಳುಬ್ಬಿ ಸೇರಿದಂತೆ 10 ಕ್ಕೂ ಹೆಚ್ಚು ಮಾಜಿ ಶಾಸಕರು ಭಾಗಿಯಾಗಿದ್ದರು. ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ವಕ್ಫ್ ವಿಚಾರದಲ್ಲಿ ಈಗಾಗಲೇ ಹೋರಾಟಕ್ಕೆ ವಿಜಯೇಂದ್ರ ಮೂರು ತಂಡ ರಚಿಸಿದ್ದಾರೆ.

ನಾಲ್ಕನೇ ತಂಡ ಯಾವುದೂ ಇಲ್ಲ. ಯತ್ನಾಳ್ ಅವರ ಪ್ರತ್ಯೇಕ ಹೋರಾಟಕ್ಕೆ ವರಿಷ್ಠರ ಅನುಮತಿ ಇಲ್ಲ. ಬಿಜೆಪಿ ವಿರುದ್ಧ ಯತ್ನಾಳ್ ಮಾತನಾಡಿದರೆ ಪಕ್ಷಕ್ಕೆ ಮುಜುಗರ ಆಗುತ್ತದೆ.ಇದೇ ರೀತಿ ಮಾತನಾಡಿದರೆ ರೆಬೆಲ್ಸ್ ವಿರುದ್ಧ ದೆಹಲಿಗೆ ಹೋಗಿ ದೂರು ನೀಡಬೇಕಾಗುತ್ತದೆ.

ಯತ್ನಾಳ್ ಸ್ವಾರ್ಥಕ್ಕೆ ಪ್ರತ್ಯೇಕ ಹೋರಾಟ ಮಾಡುತ್ತಿದ್ದಾರೆ. ವಿಜಯೇಂದ್ರ ಏಳಿಗೆಯನ್ನು ಸಹಿಸಲು ಯತ್ನಾಳ್ ಗೆ ಆಗುತ್ತಿಲ್ಲ. ಇವರಿಗೆ ಇವರೇ ಸ್ವಯಂಪ್ರೇರಿತ ನಾಯಕರಾಗಿದ್ದಾರೆ. ವೈಯಕ್ತಿಕ ಬೇಳೆ ಬೇಯಿಸಲು ಪ್ರತ್ಯೇಕ ಹೋರಾಟ ಅಂತಾ ಹೇಳುತ್ತಾರೆ. ಪ್ರತ್ಯೇಕ ಹೋರಾಟ ಯಾರೂ ಒಪ್ಪುವುದಿಲ್ಲ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

Edited By : Ashok M
PublicNext

PublicNext

20/11/2024 06:56 pm

Cinque Terre

22.82 K

Cinque Terre

0

ಸಂಬಂಧಿತ ಸುದ್ದಿ