ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂ.ಗ್ರಾಮಾಂತರ: ಪೇಸಿಎಂ ಪೋಸ್ಟರ್ ಅಂಟಿಸುತ್ತಿದ್ದ ಮೂವರ ಬಂಧನ: ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ನೆಲಮಂಗಲ: ಒಂದೆಡೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಾಂಗ್ರೆಸ್ನ ಪೇಸಿಎಂ, ಬಿಜೆಪಿಯ ಪೇ ಕಾಂಗ್ರೆಸ್ ಮೇಡಂ ಕೋಡ್ ಸ್ಕ್ಯಾನರ್ ಪೋಸ್ಟರ್ ಕೈ, ಕಮಲ ನಾಯಕರ ಕಿತ್ತಾಟಕ್ಕೆ ಕಾರಣವಾಗಿದೆ. ಇತ್ತ ನೆಲಮಂಗಲ ಟೌನ್‌ ವ್ಯಾಪ್ತಿಯ ಅರಿಶಿನಕುಂಟೆ, ಚೆನ್ನಪ್ಪ ಬಡಾವಣೆ, ಸುಭಾಷ್ ನಗರ, ನೆಲಮಂಗಲ ಮುಖ್ಯ ಬಸ್ ನಿಲ್ದಾಣ, ತಾಲ್ಲೂಕು‌ ಕಚೇರಿ ಸೇರಿದಂತೆ ಹಲವೆಡೆ ಕಳೆದ ರಾತ್ರಿ ಪೇಸಿಎಂ ಪೋಸ್ಟರ್ಗಳನ್ನ ಅಂಟಿಸುತ್ತಿದ್ದ ಮೂವರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನ ನೆಲಮಂಗಲ ಟೌನ್ ಪೊಲೀಸ್ರು ವಶಕ್ಕೆ ಪಡೆದಿದ್ದರು.

ಆದ್ರೆ ಪೋಸ್ಟರ್ ಅಂಟಿಸಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನ ಯಾವುದೇ ಕ್ರಮ ತೆಗೆದುಕೊಳ್ಳದೇ ಬಿಡುವಂತೆ ಇಂದು ಬೆಳಿಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ವಶಕ್ಕೆ ಪಡೆದಿದ್ದ ಮೂವರು ಯೂತ್ ಕಾರ್ಯಕರ್ತರನ್ನ ಪೊಲೀಸರು ಹೊರಬಿಟ್ಟಿದ್ದಾರೆ‌.

Edited By : Nagesh Gaonkar
PublicNext

PublicNext

23/09/2022 06:00 pm

Cinque Terre

22.56 K

Cinque Terre

0