ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದಲ್ಲಿ ಪಿಎಫ್ಐ ಮುಖಂಡನ ಫ್ಲ್ಯಾಟ್ ಮೇಲೆ ಎನ್ಐಎ ದಾಳಿ: ಬೆಂಬಲಿಗರಿಂದ ಪ್ರತಿಭಟನೆ

ಯಲಹಂಕ: ಬೆಂಗಳೂರಿನ ಪಿಎಫ್‌ಐ ಸಂಘಟನೆ ಪ್ರಧಾನ ಕಾರ್ಯದರ್ಶಿ ಹನೀಸ್ ಅಹ್ಮದ್ ಮನೆ ಮೇಲೆ ಎನ್ಐಎ ದಾಳಿ ನಡೆಸಿದೆ.

ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿ ಕಣ್ಣೂರು ಬಳಿಯ ರಾಗ ಅಪಾರ್ಟ್‌ಮೆಂಟ್‌ನ ಮನೆ ಮೇಲೆ‌ ದಾಳಿ ನಡೆಸುತ್ತಿದೆ. ಇಂದು ಮುಂಜಾನೆ 4 ಗಂಟೆಗೆ 12ಜನರ ಎನ್ಐಎ ಅಧಿಕಾರಿಗಳಿಂದ ತಂಡ ನಡೆಸಿದೆ. ಬೆಳಗ್ಗೆ 11ರ ವರೆಗೂ ದಾಳಿ ಮುಂದುವರೆದಿದೆ. ದಾಖಲೆಗಳ ಪರಿಶೀಲನೆಗೆ ಸ್ಕ್ಯಾನರ್, ಪ್ರಿಂಟರ್ ಮತ್ತು ಜೆರಾಕ್ಸ್ ಪ್ರತಿ ಪಡೆಯಲು ಕಾಗದದ ಬಂಡಲ್‌ನ ಸಹ ಎನ್ಐಎ ಅಧಿಕಾರಿಗಳು ತೆಗೆದುಕೊಂಡು ಒಳಗೆ ಹೋಗಿದ್ದಾರೆ.

ಪಿಎಫ್ಐ ಸಂಘಟನೆಯ ಹನೀಸ್ ಮನೆ ಮೇಲೆ ಕಳೆದ‌ ಎರಡು ವರ್ಷಗಳ ಹಿಂದೆಯೂ ಎನ್ಐಎ ದಾಳಿ ನಡೆಸಿತ್ತು. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆ ನೀಡದ ಹಿನ್ನಲೆ ಇದೀಗ ಮತ್ತೆ ದಾಳಿ ಮಾಡಿ ಎನ್ಐಎ ಪರಿಶೀಲನೆ ನಡೆಸುತ್ತಿದೆ. ಎನ್ಐಎ ದಾಳಿಗೆ ಯಾವುದೇ ಅಡ್ಡಿಯಾಗದ ರೀತಿ ಬಾಗಲೂರು ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ. ಕಣ್ಣೂರಿನ ರಾಗ ಅಪಾರ್ಟ್‌ಮೆಂಟ್ ಮುಂಭಾಗ. ಎನ್ಐಎ ವಿರುದ್ಧ ಗೋಬ್ಯಾಕ್ ಎನ್ಐಎ ಎಂದು ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳೀಯ ಪೊಲೀಸರು 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಯಲಹಂಕ ತಾಲೂಕು ಕಣ್ಣೂರಿನ ರಾಗ ಅಪಾರ್ಟ್ಮೆಂಟ್ ಬಳಿ ಪಿಎಫ್ಐ ಬೆಂಬಲಿಗರು ಆಗಮಿಸುತ್ತಿದ್ದಂತೆ ಪೊಲೀಸರು ಗುಂಪನ್ನು ಚದುರಿಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

22/09/2022 02:43 pm

Cinque Terre

2.1 K

Cinque Terre

0