ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ 10 ಕಡೆ ಎನ್‌ಐಎ ದಾಳಿ: ಪಿಎಫ್‌ಐ, ಎಸ್‌ಡಿಪಿಐಗೆ ಬೆಳ್ಳಂಬೆಳಗ್ಗೆ ಬಿಸಿ

ಬೆಂಗಳೂರು: ಭಯೋತ್ಪಾದನಾ ಕೃತ್ಯಕ್ಕೆ ಕುಮ್ಮಕ್ಕು ಆರೋಪದ ಮೇಲೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಕಚೇರಿ ಹಾಗೂ ನಾಯಕರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. 8 ಪಿಎಫ್‌ಐ ನಾಯಕರು ಹಾಗೂ ಎರಡು ರಾಜ್ಯ ಕಚೇರಿಯಲ್ಲಿ ಎನ್‌ಐಎ ಶೋಧ ನಡೆಸಿದೆ.

Ak ಅಶ್ರಫ್, ಶರೀಫ್ ಬಜ್ಪೆ, ನವಾಜ್ ಕಾವೂರು, ಮೊಯ್ದೊನ್ ಹಳೆಯಂಗಡಿ, ಮೊಹಮ್ಮದ್ ಶಾಕಿಬ್, ಮೊಹಮ್ಮದ್ ತಫ್ಸೀರ್, ಯಾಸಿರ್ ಹಸನ್, ಅಬ್ದುಲ್ ಖಾದರ್ ಪುತ್ತೂರ್ ಎಂಬವರ ಮೇಲೆ ದಾಳಿ ನಡೆದಿದೆ. ಇದರ ಹೊರತಾಗಿ ಮಂಗಳೂರು ಪಿಎಫ್ಐ ಕಚೇರಿ ಹಾಗೂ ಬೆಂಗಳೂರು ಪಿಎಫ್‌ಐ ಕಚೇರಿಯಲ್ಲಿ ಎನ್‌ಐಎ ತಲಾಷ್ ಮಾಡುತ್ತಿದೆ. ಇನ್ನು ಬೆಂಗಳೂರಿನ ಪಾದರಾಯನಪುರದಲ್ಲಿರುವ ಪಿಎಫ್‌ಐ ಕಾರ್ಯದರ್ಶಿ ಅಫ್ಸರ್ ಪಾಷಾ ಮನೆ ಹಾಗೂ ರಾಜ್ಯ ಅಧ್ಯಕ್ಷ ನಾಸಿರ್ ಪಾಷಾ ಮನೆ ಹಾಗೂ ಬೇರೆ ರಸ್ತೆಗಳಲ್ಲಿ ಇರುವ ಇತರ ಮನೆಗಳಿಗೆ ಎನ್‌ಐಎ ಲಗ್ಗೆ ಇಟ್ಟಿದೆ. ದಾಳಿಯನ್ನು ಖಂಡಿಸಿ ಪುಲಕೇಶಿನಗರ ಪಿಎಫ್‌ಐ ಕಚೇರಿ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

Edited By : Shivu K
PublicNext

PublicNext

22/09/2022 09:56 am

Cinque Terre

30.14 K

Cinque Terre

6