ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜನರ ಪ್ರಾಣಕ್ಕೆ ಸಂಚಕಾರ!; ಬೆಸ್ಕಾಂ ಅಂಡರ್ ಗ್ರೌಂಡ್ ಕೇಬಲ್ "ಪ್ರಹಾರ"

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿನ ದಿನಗಳಲ್ಲಿ BESCOM ನಿರ್ಲಕ್ಷ್ಯದಿಂದ ಹಲವಾರು ಅನಾಹುತಗಳು ಸಂಭವಿಸುತ್ತಿವೆ. ಜನರು ತಿಂಗಳಿಗೊಬ್ಬರಂತೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ!

ಈ ಬೆಸ್ಕಾಂ ಅಧಿಕಾರಿಗಳು, ಬೆಸ್ಕಾಂ ಅಂಡರ್ ಗ್ರೌಂಡ್ ಕೆಲಸ ಮಾಡಲು ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ಕೊಡ್ತಾರೆ‌. ಅವ್ರು 5-6 ಅಡಿ ಗುಂಡಿ ತೆಗೆದು ಮುಚ್ಚಬೇಕಿದ್ದ ಬೆಸ್ಕಾಂ ಅಂಡರ್ ಗ್ರೌಂಡ್ ಕೇಬಲ್ ರಸ್ತೆಯ ಮೇಲೆಯೇ ಕಾಣ್ತಿದೆ. ಇದನ್ನ ಒಂದು ಬಾರಿಯಾದ್ರೂ ಆ ಭಾಗದ ಬೆಸ್ಕಾ ಅಧಿಕಾರಿಗಳು ಕಣ್ಣೆತ್ತಿ ನೋಡಲೇ ಬೇಕು‌.

ಆದ್ರೆ, ಅವರು ಚೆಕ್ ಮಾಡದ ಕಾರಣ ಇವತ್ತು ನಗರದ ಕೆಂಗೇರಿ ಸಮೀಪದಲ್ಲಿರುವ ಚೆಕ್ ಪೋಸ್ಟ್ ಹಿಂಭಾಗದ ರಸ್ತೆಯಲ್ಲಿ ಅಂಡರ್ ಗ್ರೌಂಡ್ ಬೆಸ್ಕಾಂ ಕೇಬಲ್ ಹೊರಗೆ ಬಿಟ್ಟಿದ್ದಾರೆ. ಹೀಗಾಗಿ ಅಲ್ಲೇ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಅದನ್ನ ತುಳಿದು ಆಸ್ಪತ್ರೆ ಸೇರಿದ್ದಾರೆ!

ಈ ಜಾಗದಲ್ಲಿ ಶೇಷಾದ್ರಿಪುರಂ ಕಾಲೇಜು, ಚೆಕ್ ಪೋಸ್ಟ್, ಕೆಂಗೇರಿ ಉಪನಗರದ ಸರ್ಕಾರಿ ಆಸ್ಪತ್ರೆ ಎಲ್ಲವೂ ಬರೋದ್ರಿಂದ ಅಧಿಕಾರಿಗಳು ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ರೆ ದಿನಕ್ಕೊಬ್ಬರಂತೆ ಸಾರ್ವಜನಿಕರ ಪ್ರಾಣ ಹೋಗುವುದ್ರಲ್ಲಿ ಡೌಟೇ ಇಲ್ಲ.

Edited By : Shivu K
Kshetra Samachara

Kshetra Samachara

30/09/2022 12:47 pm

Cinque Terre

3.24 K

Cinque Terre

0

ಸಂಬಂಧಿತ ಸುದ್ದಿ