ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಸದ ವಾಸನೆ ಇಂದ ‌ಬೇಸತ್ತ ಸಾರ್ವಜನಿಕರು..!

ಬೆಂಗಳೂರು: ಬೆಂಗಳೂರಿನ ಯಾವುದೇ ಮೂಲೆ ನೋಡಿದ್ರೂ ಕಸ. ಈ ಸಮಸ್ಯೆಯನ್ನ ಬಗೆ ಹರಿಸಲು ಬಿಬಿಎಂಪಿಗೆ ದೊಡ್ಡ ಚಾಲೆಂಜ್ ಎದುರಾಗಿದೆ‌. ಆದ್ರೆ ಇಲ್ಲೊಂದು ಜಾಗದಲ್ಲಿ ಅರ್ಧ ಕಿ.ಮೀ ರಸ್ತೆ ಪೂರ್ತಿಯೂ ಹಾಳಾಗಿದೆ. ಹಾಳಾಗಿರುವ ರಸ್ತೆಯಲ್ಲೆ ಕಸ ಹಾಕಿ ಕಸದ ಡಂಪಿಂಗ್ ಯಾರ್ಡ್ ರೀತಿ ಮಾಡಿ ಬಿಟ್ಟಿದ್ದಾರೆ.

ಈ ರಸ್ತೆ ಇರೋದು ಕೆಂಗೇರಿಯ ಜ್ಞಾನಭಾರತಿ ಬಿಡಿಎ ಅಪಾರ್ಟ್‌ಮೆಂಟ್ ಹತ್ತಿರ. ಅಕ್ಷರಶಃ ಈ ರಸ್ತೆ ಹೇಗಿದೆ ಅಂದ್ರೆ ಕೊಳೆತು ಗಬ್ಬು‌ನಾರುತ್ತಿದೆ. ಈ ರಸ್ತೆ ಕೆಂಗೇರಿಯಿಂದ ಬಿಡಿಎ ಅಪಾರ್ಟ್‌ಮೆಂಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಆದ್ರೆ ಈಗ ಸದ್ಯದ ಮಟ್ಟಕ್ಕೆ ಈ ರಸ್ತೆ ಮುಚ್ಚಲಾಗಿದೆ. ಈ ರಸ್ತೆಯಲ್ಲಿರುವ ಕಸದಿಂದ ಉಸಿರುಗಟ್ಟಿಸುತ್ತಿದೆ. ಶಾಶ್ವತವಾಗಿ ಈ ರಸ್ತೆ ಮುಚ್ಚಬೇಕು. ಕಳ್ಳರ ಕಾಟವೂ ಸಹ ಜಾಸ್ತಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೇಳಿದ್ರಲ್ಲ‌ ಸ್ಥಳೀಯರ ಪರಿಸ್ಥಿತಿಯನ್ನ, ಬಹಳಷ್ಟು ಸಮಸ್ಯೆಯಾಗ್ತಿದೆ. ಶಾಲೆಗೆ ಹೋಗಬೇಕಾದ್ರೆ ಈ ರಸ್ತೆಯನ್ನ ಬಳಸುತ್ತೇವೆ. ಮುಖ್ಯ ರಸ್ತೆಯಲ್ಲಿ ಹೋದ್ರೆ, ವಾಹನಗಳ ಕಿರಿಕಿರಿ ಹಾಗಾಗಿ ಈ ರಸ್ತೆಗೆ ಬರುತ್ತೇವೆ. ಆದ್ರೆ ಮಾಸ್ಕ್ ಹಾಕಿದ್ರೂ ಇಲ್ಲಿ ಹೋಡಾಡುವುದಕ್ಕೆ ಆಗೋದಿಲ್ಲ ಅಂತಾರೆ ವಿದ್ಯಾರ್ಥಿಗಳು.

ಇನ್ನು ಈ ರಸ್ತೆ ಮುಚ್ಚಿದ್ರು ಜನ್ರು ಈ ರಸ್ತೆಯನ್ನ ಬಳಸುತ್ತಿದ್ದಾರೆ.‌ ರೈಲ್ವೆ ಸ್ಟೇಷನ್‌ಗೆ, ಬಿಡಿಎ ಅಪಾರ್ಟ್ಮೆಂಟ್‌ಗೆ, ಕೆಂಗೇರಿ ಉಪನಗರಕ್ಕೆ ಹತ್ತಿರವಾಗುತ್ತದೆ. ಆದ್ರೀಗ ಈ ರಸ್ತೆ ಬಹಳಷ್ಟು ಅದ್ವಾನವಾಗಿದೆ. ಬೀದಿ ದೀಪವಿಲ್ಲ. ಕಳ್ಳರ ಕಾಟ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಯಾವ ಇಲಾಖೆ ಅಧಿಕಾರಿಯು ಕ್ಯಾರೆ ಅನ್ನುತ್ತಿಲ್ಲ. ಜವಬ್ದಾರಿಯುತ ಕೆಲಸ ಮಾಡ್ತಿಲ್ಲ.‌

-ರಂಜಿತಾ ಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು. ‌

Edited By : Shivu K
Kshetra Samachara

Kshetra Samachara

25/09/2022 03:39 pm

Cinque Terre

5.56 K

Cinque Terre

0

ಸಂಬಂಧಿತ ಸುದ್ದಿ