ಬೆಂಗಳೂರು: ಅವರೆಲ್ಲ ಇಂದು ಎಂದಿನಂತೆ ಬೆಳಗ್ಗೆ ಕೆಲಸಕ್ಕಾಗಿ ಕಂಪನಿಗೆ ಬಂದಿದ್ದರು. ಆದರೆ ಕಂಪನಿಯ ಆಚೆ ಹಾಕಿದ್ದ ಬೋರ್ಡ್ ನೋಡಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಹೌದು ಶನಿವಾರ ಕೆಲಸ ಮುಗಿಸಿ ಮನೆಗೆ ಹೋಗಿದ್ದ ಸಿಬ್ಬಂದಿ ಸೋಮವಾರ ಬಂದು ನೋಡಿದಾಗ ತಾವು ಕೆಲಸ ಮಾಡುತ್ತಿದ್ದ ಕಂಪನಿ ಕ್ಲೋಸ್ ಆಗಿ ಹೋಗಿತ್ತು ಮತ್ತು ಎಲ್ಲಾ ಸಿಬ್ಬಂದಿಗಳನ್ನು ಟರ್ಮಿನೇಟ್ ಮಾಡಿದ್ದೇವೆ ಎಂದು ಬೋರ್ಡ್ ಕೂಡ ಹಾಕಲಾಗಿತ್ತು. ಇದರಿಂದ ದಿಕ್ಕೇ ತೋಚದಂತೆ ಸಿಬ್ಬಂದಿ ಕಂಪನಿ ಹೊರಗೆ ಕುಳಿತಿದ್ದಾರೆ.
ಹೌದು ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇದ್ದ ಖಾಸಗಿ ಕಂಪನಿಯೊಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮುಚ್ಚಿಹೋಗಿತ್ತು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕೂಡ ಯಾವುದೇ ಮಾಹಿತಿ ನೀಡದೆ ಮುಚ್ಚಿದ ಕಂಪನಿಯ ವಿರುದ್ಧ ಕಾರ್ಮಿಕರು ಪ್ರತಿಭಟನೆ ಮಾಡಿದರು. ಸುಮಾರು ಹತ್ತು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡ್ತಿರುವ ಸಿಬ್ಬಂದಿ ಈಗ ದಿಕ್ಕೇ ತೋಚದಂತೆ ಕಂಪನಿಯ ಹೊರಗೆ ನಿಂತಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
12/09/2022 09:25 pm