ಬೆಂಗಳೂರು: ನಿನ್ನೆ ರಾತ್ರಿ ಸುರಿದಿರುವ ಮಳೆಗೆ ಬೆಂಗಳೂರೇ ತತ್ತರಿಸಿ ಹೋಗಿದೆ. ಎಷ್ಟೋ ರಸ್ತೆಗಳಲ್ಲಿ ನೀರು ತುಂಬಿ ಜನರು ಹೊರ ಹೋಗಲೂ ಸಾಧ್ಯವಾಗದಂತೆ ಆಗಿದೆ.
ಬೆಂಗಳೂರಿನ ಟಾಟಾ ನಗರದಲ್ಲಿ ರಾತ್ರಿಯಿಂದ ನಿಂತಿರುವ ನೀರು ಒಂದು ಚೂರು ಕಡಿಮೆ ಆಗದೇ , ಮನೆಗಳಿಗೂ ನುಗ್ಗಿದೆ. ಜನ ಸಂಚಾರ ಮಾಡೋದಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ಸುರಿದ ಮಳೆ ಪರಿಣಾಮ ಮಳೆ ನೀರು ಹೊರ ಹಾಕೋಕೆ ಹರ ಸಾಹಸ ಪಡುತ್ತಿದ್ದಾರೆ ಇಲ್ಲಿನ ನಿವಾಸಿಗಳು.
PublicNext
22/10/2024 01:20 pm