ಬೆಂಗಳೂರು: ಕೆಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಮಹಾಮೋಸದ ಗೋಲ್ ಮಾಲ್ ಬಗ್ಗೆ ಸ್ಟಿಂಗ್ ಮಾಡಿ ಅಧಿಕಾರಿಗಳ ಬಗ್ಗೆ ನಮ್ಮ ರಿಪೋರ್ಟರ್ ವರದಿ ಬಿತ್ತರಿಸಿದ್ರು. ಆಸ್ಪತ್ರೆಯಲ್ಲಿ ನಡೆಯುವ ಬೇಕಾ ಬಿಟ್ಟಿ ಚಿಕಿತ್ಸೆ ಗಲೀಜಿನ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿತ್ತು.
ಈ ಬಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಹೆಲ್ತ್ ಇನ್ಸ್ಪೆಕ್ಟರ್ ವಿವೇಕ್ ಡಾಕ್ಟರ್ ಗಿರೀಜಾ ಅವರನ್ನ ಪ್ರಶ್ನೆ ಮಾಡಿದ್ದಾರೆ. ಒಂದು ವಾರದ ಗಡುವುಕೊಟ್ಟಿದ್ದಾರೆ ಎಲ್ಲವೂ ಸರಿಯಾಗಬೇಕು. ಇಲ್ಲದಿದ್ದಲ್ಲಿ ಯಾರೆಲ್ಲ ಇದರಲ್ಲಿ ಶಾಮೀಲಾಗಿದ್ದಾರೋ ಎಲ್ಲರ ಮೇಲೆ ಆಕ್ಷನ್ ತೆಗೆದುಕೊಳ್ಳಲಾಗುವುದು ಎಂದರು.
ಇದನ್ನು ಮೇಲ್ನೋಟಕ್ಕೆ ಹೇಳಿದ್ರೊ, ಪ್ರಶ್ನೆ ಮಾಡಿದ್ರೊ ಗೊತ್ತಿಲ್ಲ. ಆದ್ರೆ ಆಕ್ಷನ್ ತೆಗೆದುಕೊಳ್ಳುವವರೆಗೂ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿಡೋದಿಲ್ಲ.
-ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು ..
PublicNext
20/09/2022 08:19 am