ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಸ್ ಸ್ಟಾಪ್‌ಗಾಗಿ ಕೋಟ್ಯಾಂತರ ರುಪಾಯಿ ನಷ್ಟ..!

ಬೆಂಗಳೂರು: ನೋಡಲು ಇದು ಬಸ್ ಸ್ಟಾಪ್. ಪ್ರಯಾಣಿಕರೇ ಇಲ್ಲದ ಚೇರ್‌ಗಳು, ಜಾಡು ಕಟ್ಟಿರುವ ಗೋಡೆಗಳು. ಟರ್ನಿಂಗ್ ತೆಗೆದುಕೊಳ್ಳಲಾಗದೇ ಕಷ್ಟ ಪಡುತ್ತಿರುವ ಚಾಲಕರು. ಈ ದೃಶ್ಯಗಳೆಲ್ಲ ಕಂಡು ಬಂದದ್ದು ಕೆಂಗೇರಿ ಉಪನಗರದ ಬಸ್ ಸ್ಟಾಪ್‌ನಲ್ಲಿ.

ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಕೆಂಗೇರಿ ಉಪನಗರದ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಆದ್ರೆ ಈ ಬಸ್ ಸ್ಟಾಪ್‌ಗೆ ಬಸ್ಸುಗಳು ಬರೋದೇ ಇಲ್ಲ. ಪ್ರಯಾಣಿಕರ ಒಡನಾಟವೇ ಇಲ್ಲದಂತಾಗಿ, ಬಸ್ ಸ್ಟಾಪ್ ಪೂರ್ತಿಯೂ ಖಾಲಿ ಹೊಡೆಯುತ್ತಿದೆ. ಶೌಚಾಲಯದಲ್ಲಿ ಕರೆಂಟ್ ಇಲ್ಲ, ನೀರಿಲ್ಲ. ಅವೈಜ್ಞಾನಿಕ ಕಾಮಗಾರಿ ಮಾಡಿ ಏನು ಇಲ್ಲದೇ ಕೋಟ್ಯಾಂತರ ರುಪಾಯಿ ನೀರಿನಲ್ಲಿ ಹೋಮ ಮಾಡಿದ ಹಾಗಾಗಿದೆ.

ಈ ಬಸ್ಸ್ ಸ್ಟಾಪ್ ಕಟ್ಟಿ 5-6 ವರ್ಷವಾಯ್ತು. ಆದ್ರೆ ಒಂದು ವರ್ಷವಾದ್ರು ಬಸ್ಸುಗಳು ಒಳಗೆ ಬರೋದಿಲ್ಲ. ಪ್ರಯಾಣಿಕರು ಬಂದ್ರು ಸಹ ಬಸ್ಸುಗಳಿಗೆ ಕಾಯ್ದು ಸುಸ್ತಾಗಬೇಕಿದೆ.

ಇನ್ನೂ ಈ ಬಗ್ಗೆ ಬಸ್ ಸ್ಟಾಪ್‌ನಲ್ಲಿರುವ ಟಸಿಗಳನ್ನ ಕೇಳಿದ್ರೆ, ಈ ಬಸ್ ಸ್ಟಾಪ್ ನೇ ಅವೈಜ್ಞಾನಿಕವಾಗಿ ಕಟ್ಟಿದ್ದಾರೆ. ಬಸ್‌ಗಳು ಸ್ಟಾಪ್ ಒಳಗಡೆ ಬರುವಾಗ ಒಂದು ಕಡೆ ಬೆಂಗಳೂರ್ ಒನ್ ಇದೆ. ಮತ್ತೊಂದು ಕಡೆ ಹೋಟೆಗಳಿವೆ. ಅಲ್ಲೆ ಗಾಡಿಗಳನ್ನ ನಿಲ್ಲಿಸಿ ಹೋಗ್ತಾರೆ. ಬಸ್ ಟರ್ನಿಂಗ್ ಮಾಡುವ ಜಾಗವೂ ಸಣ್ಣದು. ಹೊರಗಡೆ ಹೋಗುವಾಗ ವಿದ್ಯುತ್ ಕಂಬವಿದೆ. ಹೀಗಾಗಿ ಹೇಗೆ ಡ್ರೈವರ್‌ಗಳು ಒಳಗಡೆ ಬರ್ತಾರೆ ಅಂತಾರೆ.

ಒಟ್ನಲ್ಲಿ ಪ್ಲಾನಿಂಗ್ ಇಲ್ಲದೇ ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಕಟ್ಟಿದ ಬಸ್ ನಿಲ್ದಾಣ ಉಪಯೋಗಕ್ಕೆ ಬಾರದಂತಾಗಿದೆ. ಇದನ್ನ ಬೇರೆ ಏನಾದ್ರು ಸರ್ಕಾರಿ ಕಚೇರಿ ಮಾಡಿ, ಬೇರೆ ಕಡೆ ಬಸ್ ನಿಲ್ದಾಣ ನಿರ್ಮಿಸಬೇಕಿದೆ.

-ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By : Shivu K
PublicNext

PublicNext

20/09/2022 11:23 am

Cinque Terre

17.66 K

Cinque Terre

0

ಸಂಬಂಧಿತ ಸುದ್ದಿ