ಆರ್‌ಆರ್ ನಗರ: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಒಂದಲ್ಲ ಒಂದು ಗೊಂದಲ ಮಯ ವಾತಾವರಣ ಸೃಷ್ಟಿಯಾಗ್ತಾನೆ ಇರುತ್ತೆ. ಹೀಗೆ ನಿನ್ನೆ ನಡೆದ ಒಂದು ದುರ್ಘಟನೆ ಇಂದೂ ಸಹ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಕಂಪ್ಲೀಟ್ ಯೂನಿವರ್ಸಿಟಿ ಒಳಗಡೆ ಯಾವ ಖಾಸಗಿ ವಾಹನಗಳು ಹೋಗದಂತೆ. ಹೋರಾಟ ಮಾಡಿದ್ದಾರೆ.
ಹೌದು ನೆನ್ನೆ ಬೆಂಗಳೂರು ವಿಶ್ವವಿದ್ಯಾಲದಲ್ಲಿ ವಿದ್ಯಾರ್ಥಿನಿ ಶಿಲ್ವಾ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಈ ಕಾರಣ ವಿದ್ಯಾರ್ಥಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಕ್ರಮ ತೆಗೆದುಕೊಳ್ಳದ ಕಾರಣ ನಿನ್ನೆ ಇಂದಾನೂ ವಿದ್ಯಾರ್ಥಿಗಳು ರಸ್ತೆಗಿಳಿದು ಆಕ್ರೋಶ ಹೊರಹಾಕಿದ್ದಾರೆ.
ವಿವಿಯಲ್ಲಿ ಏನೆ ಆದ್ರು ಸಹ ವಿದ್ಯಾರ್ಥಿಗಳೆ ಖಂಡಿಸಬೇಕು. ಆದ್ರೆ ಈಗ ನಡೆದಿರುವ ಘಟನೆ, ಆಡಳಿತ ಮಂಡಳಿಗೂ ಸೇರಿದೆ ಇವತ್ತು ವಿದ್ಯಾರ್ಥಿನಿಗೆ ಆದ ಗತಿ ಮುಂದೆ ಒಂದು ದಿನ ಪ್ರಾಧ್ಯಾಪಕರಿಗೆ, ಆಡಳಿತ ಸಿಬ್ಬಂದಿ ಆಗೋದಿಲ್ವಾ.?
ಇನ್ನು ಈ ಪ್ರತಿಭಟನೆ ಯಾವ ಹಂತಕ್ಕೆ ಹೋಗುತ್ತೆ. ಸರ್ಕಾರ ಈ ಬಗ್ಗೆ ಏನು ಉತ್ತರ ಕೊಡುತ್ತೆ ಅಂತ ಕಾದು ನೋಡಬೇಕಿದೆ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
11/10/2022 10:15 pm