ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಿಂಚಣಿಗೆ ಆಗ್ರಹಿಸಿ ಅನುದಾನಿತ ಶಾಲಾ ಶಿಕ್ಷಕರ ಅರೆಬೆತ್ತಲೆ‌ ಪಾದಯಾತ್ರೆ

ನೆಲಮಂಗಲ: ನಿವೃತ್ತಿ ನಂತರ ಪಿಂಚಣಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರು ಅರೆಬೆತ್ತಲೆ‌ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ನಿನ್ನೆ ಶುಕ್ರವಾರ ಮುಂಜಾನೆ ತುಮಕೂರಿನ ಸಿದ್ಧಗಂಗಾ ಮಠದಿಂದ ಹೊರಟು ಸಂಜೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪಾದಯಾತ್ರೆ ಪ್ರವೇಶಿಸಿದೆ. ನೆಲಮಂಗಲ ಕಡೆಗೆ ಅರಬೆತ್ತಲೆ ಪಾದಯಾತ್ರೆ ಮುಂದುವರೆದಿದೆ.

ಅಕ್ಟೋಬರ್ 10ನೇ ತಾರೀಖು ಬೆಂಗಳೂರಿನ ಫ್ರೀಡಂ ಪಾರ್ಕ್ ಪ್ರವೇಶಿಸಲಿದೆ. ಇದೇ ವೇಳೆ ನೌಕರರ ಅರೆಬೆತ್ತಲೆ ಪಾದಯಾತ್ರೆಗೆ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಭೋಜೆಗೌಡ ಸಾಥ್ ನೀಡಿದ್ದು ನೌಕರರ ಪರವಾಗಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಸದ್ಯ ಇಂದು ದಾಬಸ್‌ಪೇಟೆಯಲ್ಲಿ ಆರಂಭವಾದ ಪಾದಯಾತ್ರೆ ಇಂದು ಸಂಜೆ ನೆಲಮಂಗಲ ನಗರ ಪ್ರವೇಶಿಸಲಿದೆ. ನಾಳೆ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದೆ.

Edited By :
PublicNext

PublicNext

08/10/2022 01:40 pm

Cinque Terre

25.88 K

Cinque Terre

1

ಸಂಬಂಧಿತ ಸುದ್ದಿ