ಬೆಂಗಳೂರು: ನಾಳೆಯಿಂದ ನವರಾತ್ರಿ ಶುರುವಾಗುತ್ತಿದೆ. ಜೊತೆಗೆ ದಸರಾ ಹಬ್ಬದ ಅಂಗವಾಗಿ ಶಾಲೆಗಳಿಗೆ ಮತ್ತು ಕಾಲೇಜ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಹಬ್ಬಕ್ಕಾಗಿ ಪ್ರಯಾಣಿಕರು ಊರುಗಳಿಗೆ ತೆರಳ್ಳುತ್ತಿದಾರೆ. ಆದ್ರೆ ಈಗ ಖಾಸಗಿ ಬಸ್‌ಗಳ ದರ ದುಬಾರಿಯಾಗಿದ್ದು, ಜನರು ಅಸಮಾಧಾನಗೊಂಡಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನ ಆಟೋಗಳಲ್ಲಿಯೂ ಪ್ರಯಾಣ ದರ ಏರಿಕೆಯಾಗಿದೆ. ಸರಕುಗಳು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಪ್ರಯಾಣಿಕರ ಪ್ರಯಾಣ ದರ ಹೆಚ್ಚಳವಾಗಿದ್ದು, ರಾತ್ರಿ ಸಮಯದಲ್ಲಿ ಖಾಸಗಿ ಬಸ್‌ಗಳಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
PublicNext
25/09/2022 05:16 pm