ಬೆಂಗಳೂರು: ಪೋಷಕರು ಮಕ್ಕಳು ಚೆನ್ನಾಗಿರಲಿ ಅಂತ ಸಾಲ ಸೋಲ ಮಾಡಿ ಮಕ್ಳನ್ನ ಓದಿಸಿ ಜೀವನ ರೂಪಿಸಿ ಕೊಡುತ್ತಾರೆ. ತಾನು ಪಟ್ಟ ಕಷ್ಟ ನನ್ನ ಮಕ್ಕಳಿಗೆ ಬರಬಾರದು ಅಂತ ಅಂದುಕೊಳ್ಳುತ್ತಾರೆ. ಆದರೆ ಅದೇ ಮಕ್ಳು ದೊಡ್ಡೋರ್ ಆದ್ಮೇಲೆ ತಂದೆ ತಾಯಿಯನ್ನು ಬೀದಿಗೆ ತಳ್ಳಿ ಭಿಕ್ಷೆ ಬೇಡಿ ಜೀವನ ಸಾಗಿಸೋ ತರ ಮಾಡುತ್ತಿದ್ದಾರೆ..
ದಾನ-ಧರ್ಮ ಮಾಡ್ತಾರೆ ಮಕ್ಕಳು ಇಲ್ಲದವರು. ಆದರೆ ಭಿಕ್ಷೆ ಬೇಡಿ ತಿಂತಿದ್ದಾರೆ ಮಕ್ಕಳ ಹೆತ್ತವರು.. ಈ ಸಾಂಗ್ ಕೇಳಿದರಲ್ಲ ಹೆತ್ತವರ ಚಿತ್ರದ ಅಣ್ಣಾವ್ರ ಹಾಡಿರುವ ಸಾಂಗ್ ಟೆಟ್ ಇಂಥದ್ದೇ ಒಂದು ಸ್ಟೋರಿ ಆನೇಕಲ್ ತಾಲೂಕಿನಲ್ಲಿ ಮಕ್ಕಳು ತಂದೆಯನ್ನು ಹೊರಹಾಕಿ ಬೀದಿ ಬೀದಿ ಭಿಕ್ಷೆ ಬೇಡಿ ಊಟ ಮಾಡುತ್ತಿದ್ದಾರೆ.
ಹೀಗೆ ಕಣ್ಣೀರು ಹಾಕೊಂಡು ಮಕ್ಕಳ ಬಗ್ಗೆ ಹೇಳ್ತಿದ್ದಾರಲ್ಲ.. ಇವರ ಹೆಸರು ಚಿನ್ನಪ್ಪ ಅಂತ. ಮಾಯಸಂದ್ರ ಗ್ರಾಮದ ನಿವಾಸಿ. ವೃತ್ತಿಯಲ್ಲಿ ರೈತರಾದ ಇವರಿಗೆ ಇಬ್ಬರು ಮಕ್ಕಳು. ಮಗಳನ್ನ ಎಂ.ಕಾಂ ಮಾಡಿಸಿದರೆ ಮಗನನ್ನು ಎಸ್‌ಎಸ್‌ಎಲ್‌ಸಿ ತನಕ ಓದಿಸಿ ಜೀವನ ರೂಪಿಸಿ ಕೊಟ್ಟಿದ್ದಾರೆ ಅದರೆ ಮಕ್ಕಳು ಮಾತ್ರ ತಂದೆಯನ್ನು ಬೀದಿ ತಳ್ಳಿ ಭಿಕ್ಷೆ ಬೇಡಿ ತಿನ್ನುವ ಹಾಗೆ ಮಾಡಿದ್ದಾರೆ..
ಇನ್ನು ಚಿನ್ನಪ್ಪ ಪತ್ನಿ ಸಹ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ದೇವರ ಪಾದ ಸೇರ್ಕೊಂಡ್ರಂತೆ. ಆಗ್ಲಿಂದ ಚಿನ್ನಪ್ಪ ಕುಡಿತಕ್ಕೆ ದಾಸರಾಗಿದ್ದಾರಂತೆ. ಇದ್ದ ಮಗ ಹೆಂಡ್ತಿ ಮನೆ ಸೇರ್ಕೊಂಡಿದ್ರಂತೆ ಇನ್ನು ಇವರಿಗೆ ಒಂದೇ ಎಕರೆ ಜಮೀನಿದ್ದು ಸಹಿ ಹಾಕಿದ ಕಾರಣಕ್ಕೆ ಮಕ್ಕಳೇ ಇವರನ್ನು ಮನೆಯಿಂದ ಹೊರದುಬ್ಬಿದರಂತೆ. ಇನ್ನು ರಸ್ತೆಯಲ್ಲಿ ಹೋಗುವಾಗ ಅಪಘಾತ ನಡೆಸಿ ಎರಡು ಕಾಲುಗಳು ಸ್ವಾಧೀನ ಕಳಕೊಂಡಿದ್ಯಂತೆ. ಹೀಗಾಗಿ ಯಾರು ಇಲ್ಲದ ಕಾರಣಕ್ಕೆ ಭಿಕ್ಷೆ ಬೇಡಿ ತಿನ್ನುವಂತ ಪರಿಸ್ಥಿತಿ ಎದುರಾಗಿದೆ.
ಒಟ್ಟಾರೆ ಮಕ್ಕಳು ದೇವರಂತಾರೆ. ಮಕ್ಕಳು ಇಲ್ಲದವರು ದೇವರ ಶಾಪಕ್ಕೆ ಸಿಕ್ಕಿದರೆ, ಮಕ್ಕಳ ಹೆತ್ತವರು ಕಣ್ಣೀರಲ್ಲಿ ಕಾಲ ಕಳೆಯುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.
-ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್, ಬೆಂಗಳೂರು
PublicNext
14/09/2022 10:30 am