ವರದಿ- ಬಲರಾಮ್ ವಿ
ಬೆಂಗಳೂರು: ಸರ್ಕಾರಿ ಆಸ್ಪತ್ರೆ ವೈದ್ಯರು ಎಂದರೆ ಬಡವರ ಪಾಲಿನ ದೇವರು ಎಂಬ ಮಾತಿದೆ. ಆದರೆ ಇಲ್ಲೋರ್ವ ರೋಗಿಯು ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆ ಹೊರಗಡೆ ಮಲಗಿರುವ ಯಾವೊಬ್ಬ ವೈದ್ಯ ಅಥವಾ ಆಸ್ಪತ್ರೆ ಸಿಬ್ಬಂದಿ ಆತನ ಆರೋಗ್ಯ ವಿಚಾರಿಸದ ಅಮಾನವೀಯ ಘಟನೆ ನಡೆದಿದೆ.
ಹೌದು. ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ರೋಗಿಯ ಕುರಿತು ಸ್ಥಳೀಯ ವ್ಯಾಪಾರಿಯೊಬ್ಬರು ವೈದ್ಯರ ಗಮನಕ್ಕೆ ತಂದರೂ ಯಾವುದೇ ಕರುಣೆ ತೋರುವ ಮನಸ್ಥಿತಿ ಇಲ್ಲಿನ ವೈದ್ಯರಿಗಿಲ್ಲ.
ರೋಗಿಯು ನಾಲ್ಕೈದು ದಿನಗಳಿಂದ ಆಸ್ಪತ್ರೆಯ ಆವರಣದಲ್ಲಿ ಮಲಗಿಕೊಂಡಿದ್ದು, ಯಾವುದೇ ವೈದ್ಯರು ಅಥವಾ ಸಿಬ್ಬಂದಿ ಆರೋಗ್ಯ ವಿಚಾರಿಸುತ್ತಿಲ್ಲ. ಅವರನ್ನು ವಿಚಾರಿಸಲು ಸಂಬಂಧಪಟ್ಟವರು ಯಾರು ಬಂದಿಲ್ಲ ಎಂದು ಸ್ಥಳೀಯ ವ್ಯಾಪಾರಿ ತಿಳಿಸಿದ್ದಾರೆ.
PublicNext
27/09/2022 10:00 pm