ಬೆಂಗಳೂರು: ಜನಸಾಮಾನ್ಯರ ಸಮಸ್ಯೆಯನ್ನು ನೇರವಾಗಿ ತಿಳಿದುಕೊಂಡು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನಡೆ ಎಂಬ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ ಆದರೆ ಜಿಲ್ಲಾಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯ ಸಭೆ ನೆಲಕಚ್ಚಿದೆ. ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಗ್ರಾಮ ವಾಸ್ತವ್ಯ ಗದ್ದಲ ಕೋಲಾಹಲ ನಡುವೆಯೇ ಕಾಟಾಚಾರಕ್ಕೆ ನಡೆದಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾತ್ಲಿಂಗಪುರದಲ್ಲಿ ಇಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳೇ ಸಭೆಗೆ ಹಾಜರಾಗಿರಲಿಲ್ಲ. ಇದರಿಂದ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ರು.
ಇನ್ನು ಸರ್ಕಾರಿ ಈ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ಬದಲಾಗಿದೆ ಜನರ ಸಮಸ್ಯೆ ಕೇಳುವ ಬದಲು ಚಕ್ ವಿತರಣೆಗೆ ಸೀಮಿತವಾಗಿದೆ ಜಿಲ್ಲಾಧಿಕಾರಿಗಳ ಬಳಿ ಅಹವಾಲು ಸಲ್ಲಿಸಲು ಬಂದವರಿಗೆ ಜನರು ಆಕ್ರೋಶ ಮತ್ತು ಹಿಡಿಶಾಪ ಹಾಕಿದ್ದಾರೆ ಸಾರ್ವಜನಿಕರ ಹಣ ದುಂದು ವೆಚ್ಚಕ್ಕೆ ಜಿಲ್ಲಾಧಿಕಾರಿಗೆ ಶಿಕ್ಷೆ ಆಗಬೇಕು ಆಗ್ರಹ ಮಾಡಿದ್ರು ಇನ್ನು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಕಚೇರಿಗಳಿಗೆ ಅಲೆದು ಅಲೆದು ಕೊನೆಗೆ ಜಿಲ್ಲಾಧಿಕಾರಿಗೆ ದೂರು ನೀಡಲು ಬಂದಿದ್ವಿ ಆದರೆ ಜಿಲ್ಲಾಧಿಕಾರಿಗಳ ಗೈರು ಹಾಜರಿನ್ದಾಗಿ ಸಾರ್ವಜನಿಕರು ನಿರಾಸೆಯಿಂದ ವಾಪಸ್ಸಾದರು.
-ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
Kshetra Samachara
18/09/2022 12:09 pm