ದೇವನಹಳ್ಳಿ: ಜನರಿಗೆ ಸರ್ಕಾರದ ಸೌಲಭ್ಯ ಸಿಗಬೇಕೆಂದು "ಜಿಲ್ಲಾಧಿಕಾರಿ ನಡೆ... ಹಳ್ಳಿ ಕಡೆ" ಕಾರ್ಯಕ್ರಮ ನಡೆಸಲಾಗ್ತಿದೆ. ಇಂದು ದೇವನಹಳ್ಳಿ ತಾಲೂಕಿನ ಕಾರಳ್ಳಿಲಿ ನಡೆದ ಜಿಲ್ಲಾಧಿಕಾರಿ ನಡೆ... ಹಳ್ಳಿ ಕಡೆ ಅವ್ಯವಸ್ಥೆಗಳ ಆಗರವಾಗಿತ್ತು. ಇನ್ನು, ಜೆಡಿಎಸ್ ಶಾಸಕರು ಸರ್ಕಾರಿ ಕಾರ್ಯಕ್ರಮವನ್ನು ಜೆಡಿಎಸ್ ಪ್ರಚಾರ ಸಭೆಯನ್ನಾಗಿಸಿಕೊಂಡಿದ್ದು ದುರಂತ!
ಬೆಳಗ್ಗೆ 10ರ ಬದಲಿಗೆ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಿದ್ದೇ ಬೇಸರ ತಂದಿತ್ತು. ಇನ್ನು, ಕಾರಹಳ್ಳಿ ಗ್ರಾಮ ಪಂಚಾಯ್ತಿಯ ಆರೇಳು ಹಳ್ಳಿಗಳ ನೂರಾರು ಜನ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಬಂದು ಸಾಧ್ಯವಾಗದೆ ಪರದಾಡಿದ್ರು.
ತಡವಾದ ಪ್ರಾರಂಭ, ಜನರ ದೂರು ಆಲಿಸದೆ ಸ್ವಾಗತ, ಭಾಷಣ, ಸನ್ಮಾನ ಮಾಡಿಕೊಂಡ ಪರಿಣಾಮ ಗಂಟೆಗಟ್ಟಲೇ ಕಾದಿದ್ದ ಜನರು ಜಿಲ್ಲಾಧಿಕಾರಿ ಲತಾ ಮತ್ತು ಅಧಿಕಾರಿಗಳು ಹಾಗೂ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಮುಂದೆಯೇ ಜಗಳ ಮಾಡಿದರು. ಅರ್ಹರಿಗೆ ಸೌಲಭ್ಯ ನೀಡ್ತಿಲ್ಲ ಎಂದು ರೈತರು ದೂರಿದರು.
ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಸರ್ಕಾರಿ ಕಾರ್ಯಕ್ರಮವನ್ನು ತಮ್ಮ ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಸಭೆ ಮಾಡಿಕೊಂಡರು. ನಾನು ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ತಂದಿದ್ದೇನೆ ಎಂದು ಜಂಬ ಕೊಚ್ಚಿಕೊಂಡ್ರು. ಇದೇ ವೇಳೆ ರೈತರ ದೂರು ಸ್ವೀಕರಿಸುತ್ತಿಲ್ಲ ಎಂಬುದಕ್ಕೆ ಗರಂ ಆದ ಡಿ.ಸಿ. ಲತಾ, ಜನರಿಗೆ ಸಂಯಮದ ಪಾಠ ಮಾಡಿದರು.
ಒಟ್ಟಾರೆ ಇಂದು ದೇವನಹಳ್ಳಿಯಲ್ಲಿ ನಡೆದ "ಜಿಲ್ಲಾಧಿಕಾರಿ ನಡೆ... ಹಳ್ಳಿ ಕಡೆ" ಕಾಟಾಚಾರಕ್ಕಾಗಿ ನಡೆದರೂ ಜೆಡಿಎಸ್ ಪಕ್ಷದ ರಾಜಕೀಯ ಲಾಭಕ್ಕೆ ನೆರವಾಯ್ತು.
Kshetra Samachara
18/09/2022 11:10 am