ಹೈಕೋರ್ಟ್ ಟೋಯಿಂಗ್ ಬಗ್ಗೆ ಪರಿಶೀಲನೆ ಕಾಲಾವಕಾಶ ನೀಡಿದ ಹಿನ್ನಲೆ ಬೆಂಗಳೂರು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಟೋಯಿಂಗ್ ಕುರಿತು ಪ್ರತಿಕ್ರಿಯಿಸಿದ್ದಾರೆ.
ಹೌದು ! ಬೆಂಗಳೂರಿನಂತಹ ನಗರದಲ್ಲಿ ಟೋಯಿಂಗ್ ಅವಶ್ಯಕತೆ ಇದೆ.
ರಸ್ತೆ ಸಂಚಾರಕ್ಕೆ ಅಡ್ಡಲಾಗಿ ನಿಲ್ಲಿಸುವ ವಾಹನಗಳನ್ನ ಟೋಯಿಂಗ್ ಮಾಡುವ ಅವಶ್ಯಕತೆ ಇದೆ.
ಆದ್ರೆ ! ಈ ನಿಯಮದಲ್ಲಿ ಕೆಲವು ಲೋಪದೋಷಗಳು ಹಾಗೂ ದೂರುಗಳು ಕೂಡ ಕೇಳಿ ಬಂದಿದೆ. ಸದ್ಯ ಟೋಯಿಂಗ್ ಯಾವ ರೀತಿಯಲ್ಲಿ ? ಯಾವ ನಿಯಮಗಳ ಅಡಿಯಲ್ಲಿ ? ಮಾಡಬೇಕು ಅನ್ನೋದನ್ನ ಇಲಾಖೆ ನಿರ್ದಾರ ಮಾಡುತ್ತೆ. ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯಾಗಿ ದೂರು ಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.
PublicNext
16/09/2022 03:07 pm