ಬೆಂಗಳೂರು: ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಾಂಸ್ಕೃತಿಕ ವೈಭವವು ವಿಮಾನ ನಿಲ್ದಾಣದಲ್ಲಿ ಅನಾವರಣಗೊಂಡಿದೆ.
ಸೋಮವಾರ ಮತ್ತು ಮಂಗಳವಾರ ಸಂಜೆಯವರೆಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರಗು ಕಳೆಕಟ್ಟುತ್ತಿದೆ. ದೇಶ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ದಸರಾ ವೈಭವವನ್ನ ತಿಳಿಸಿಕೊಡುವ ಪ್ರಯತ್ನ ನಡೆಯುತ್ತಿದೆ. ಏರ್‌ಪೋರ್ಟ್ ಟರ್ಮಿನಲ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಚಾಲನೆ ನೀಡಿ ಮಾತನಾಡಿ ವೇದಿಕೆ ಕಾರ್ಯಕ್ರಮ ಕಣ್ಮನ ಸೆಳೆದಿವೆ ಎಂದರು.
ಏರ್‌ಪೋರ್ಟ್ ಒಳಗೆ ದಸರಾ ಬೊಂಬೆ ಪ್ರದರ್ಶನ ವಿಮಾನ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬರನ್ನು ಸ್ವಾಗತಿಸುತ್ತಿವೆ. ಇನ್ನು ವೇದಿಕೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ, ಯಕ್ಷಗಾನ, ತರಂಗಂ ನೃತ್ಯ, ಕಾವಡಿ ಕುಣಿತ, ಕನ್ನಡ ಜಾನಪದ ನೃತ್ಯಗಳು ನೋಡುಗರ ಕಣ್ಮನ ಸೆಳೆದವು. ವಿಮಾನ ನಿಲ್ದಾಣದ ದಸರಾ ಸಾಂಸ್ಕೃತಿಕ ಕಲಾ ತಂಡಗಳ ವೈಭವ ನೋಡಿ ಪ್ರಯಾಣಿಕರು ಮಸ್ತ್ ಖುಷಿಪಟ್ಟರು.
ಹೊರರಾಜ್ಯ ಮತ್ತು ದೇಶ ವಿದೇಶಗಳಿಂದ ಬರುವ ಜನ ವಿಮಾನ ನಿಲ್ದಾಣದಲ್ಲಿ ದಸರಾ ವೈಭವ ಎಲ್ಲರ ಮನಸೂರೆಗೊಳ್ತಿದೆ. ನಮ್ಮ ನಾಡಿನ ಭವ್ಯಪರಂಪರೆ ವಿಮಾನ ನಿಲ್ದಾಣದಲ್ಲಿ ಗಮನ ಸೆಳರಯುತ್ತಿರುವುದು ಖುಷಿ ವಿಷಯ.
PublicNext
04/10/2022 02:51 pm