ಬೆಂಗಳೂರು: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದ ಪರಿಸ್ಥಿತಿ ಮಕ್ಕಳದ್ದು ಅಂದ್ರೆ ತಪ್ಪಾಗಲ್ಲ.
ಶಿಕ್ಷಣ ಇಲಾಖೆ ವಿರುದ್ಧ ಮತ್ತೆ ಪಠ್ಯ ಪುಸ್ತಕ ಸಮರವನ್ನ ಖಾಸಗಿ ಶಾಲೆಗಳ ಒಕ್ಕೂಟ ಶುರು ಮಾಡಿದೆ. ರಾಜ್ಯ ಪಠ್ಯ ಪುಸ್ತಕ ಸಂಘದ ಪುಸ್ತಕ ಖರೀದಿ ಮಾಡಲ್ಲ ಅಂತ ಖಾಸಗಿ ಶಾಲೆಗಳು ಪಟ್ಟು ಹಿಡಿದಿದೆ.
ಈ ವರ್ಷ ಮುಗಿಯುತ್ತಾ ಬಂದ್ರೂ ರಾಜ್ಯದಲ್ಲಿ 20ಪರ್ಸೆಂಟ್ ಶಾಲೆಗಳಿಗೆ ಪಠ್ಯ ಪೂರೈಕೆ ಮಾಡಿಲ್ಲ ಅನ್ನೋದು ಪೋಷಕರ ಹಾಗೂ ಖಾಸಗಿ ಶಾಲೆಗಳ ಒಕ್ಕೂಟ ವಾದ. ಈಗಲೂ ಮಕ್ಕಳಿಗೆ ಮಾರ್ಕೆಟ್ ಅಲ್ಲಿ ಖರೀದಿ ಮಾಡಿದ ಪಠ್ಯ ನೋಡಿ ಹೇಳಿ ಕೊಡುವ ಪರಿಸ್ಥಿತಿ ಇದೆ ಅನ್ನೋ ಆರೋಪ ಇದೆ.
ಸಂಪೂರ್ಣ ದುಡ್ಡು ಪಡೆದು ಇಲಾಖೆ ದೋಖಾ ಮಾಡ್ತಿದೆ ಅಂತ ಆರೋಪ ಜೊತೆಗೆ ಮುಂದಿನ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕಗಳಿಗೆ ದುಡ್ಡು ಕಟ್ಟಲು ಮತ್ತೆ ನೋಟಿಫಿಕೇಶನ್ ಮಾಡಿರುವುದು ಎಷ್ಟು ಸರಿ ಅಂತ ಪ್ರಶ್ನೆ ಎದ್ದಿದೆ. ಯಾವುದೇ ಕಾರಣಕ್ಕೂ ನಾವು ಪಠ್ಯ ಪುಸ್ತಕ ಸಂಘದ ಪುಸ್ತಕ ಖರೀದಿ ಮಾಡಲ್ಲ ಅಂತ ಖಾಸಗಿ ಶಾಲೆಗಳ ಒಕ್ಕೂಟ & ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
PublicNext
01/11/2024 12:06 pm