ಬೆಂಗಳೂರು: ಯುಜಿ ವೈದ್ಯಕೀಯ ಕೋರ್ಸ್ ಗಳ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ಅಂತಿಮ ಸುತ್ತಿನ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಿದೆ. ಬಾಕಿ ಇದ್ದ ಎಲ್ಲ 84 ವೈದ್ಯಕೀಯ ಸೀಟುಗಳೂ ಹಂಚಿಕೆಯಾಗಿವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಬೆಳಿಗ್ಗೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿತ್ತು. ಸಂಜೆ 4ರವರೆಗೆ ಯಾವುದೇ ಆಕ್ಷೇಪಣೆಗಳು ಬಾರದ ಕಾರಣ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಒಟ್ಟು 84 ವೈದ್ಯಕೀಯ ಸೀಟು ಗಳು ಈ ಸುತ್ತಿಗೆ ಹಂಚಿಕೆಗೆ ಬಾಕಿ ಇದ್ದವು. 1,960 ಮಂದಿ ಆಪ್ಷನ್ ದಾಖಲಿಸಿದ್ದರು. ಇದ್ದ ಎಲ್ಲ 84 ಸೀಟುಗಳು ಹಂಚಿಕೆಯಾಗಿದ್ದು, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ನ.5ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು.
ಪಿಜಿಸಿಇಟಿ ಅರ್ಜಿ ತಿದ್ದುಪಡಿಗೆ ಅವಕಾಶ..
ಎಂಬಿಎ, ಎಂಸಿಎ, ಎಂಟೆಕ್ ಇತ್ಯಾದಿ ಕೋರ್ಸ್‌ಗಳ ಪ್ರವೇಶಕ್ಕೆ ಸಲ್ಲಿಸಿದ್ದ ಪಿಜಿಸಿಇಟಿ ಅರ್ಜಿಗಳಲ್ಲಿನ ಸಣ್ಣಪುಟ್ಟ ದೋಷಗಳ ತಿದ್ದುಪಡಿಗೆ ನ.4ರವರೆಗೆ ಅವಕಾಶ ನೀಡಲಾಗಿದೆ.
PublicNext
30/10/2024 05:58 pm