#ದೇವನಹಳ್ಳಿ:- ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ವಿಜಯದಶಮಿ ಅಂಗವಾಗಿ ಆಯುಧ ಪೂಜೆಯನ್ನು ಸಾಂಪ್ರದಾಯಿಕವಾಗಿ ಮಾಡಲಾಯಿತು.
ವಿಶ್ವನಾಥಪುರ ಪೊಲೀಸ್ ಇನ್ಸ್ಪೆಕ್ಟರ್ ನಾಗಪ್ಪ. ಎನ್.ಅಂಬಿಗೇರ್ ಮಾತನಾಡಿ, ಜನರಿಂದ ಬರುವ ದೂರು ಸ್ವೀಕರಿಸಿ, ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ. ದಿನದ 24ಗಂಟೆ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ರೀತಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ.
ತಾಯಿ ಚಾಮುಂಡೇಶ್ವರಿ ದೇವಿ ಸಕಲ ಜೀವರಾಶಿಗೆ ನೆಮ್ಮದಿ ಮತ್ತು ಶಾಂತಿಯ ಬದುಕು ನಡೆಸಲು ಕೃಪೆ ತೋರಲಿ ಎಂದು ಪ್ರಾರ್ಥಿಸಿದರು.
ಪೊಲೀಸ್ ಠಾಣೆಯಲ್ಲಿ ಆಯೋಜನೆ ಮಾಡಲಾಗಿದ್ದ ಆಯುಧ ಪೂಜೆ ಅಂಗವಾಗಿ ಠಾಣೆಯನ್ನು ಸ್ವಚ್ಛಗೊಳಿಸಿ ಠಾಣೆಯಲ್ಲಿದ್ದ ಕಡತ , ರೈಫಲ್, ಬಂದೂಕು , ಸೇರಿದಂತೆ ಎಲ್ಲಾ ವಸ್ತುಗಳನ್ನು ಇಟ್ಟು ಪೂಜೆ ನೆರವೇರಿಸಲಾಯಿತು.
ಠಾಣೆಯನ್ನು ತಳಿರು ದೀಪಗಳಿಂದ ಸಿಂಗರಿಸಲಾಗಿತ್ತು. ವಾಹನ, ಬಂದೂಕು ಮತ್ತು ಆಯುಧಗಳಿಗೆ ಹೂವುಗಳಿಂದ ಅಲಂಕರಿಸಿದ್ದು ಗಮನ ಸೆಳೆಯಿತು.. ಇದೇ ವೇಳೆ ಪೊಲೀಸ್ ಸಿಬ್ಬಂದಿ ಕಲರ್ ಫುಲ್ ಬಟ್ಟೆ ಧರಿಸಿ ಹಬ್ಬವನ್ನು ಆಚರಿಸಿದರು..
Kshetra Samachara
13/10/2022 05:49 pm