ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಶ್ರೀಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿ ಆಚರಣೆಯನ್ನು ಸಂಭ್ರಮದಿಂದ ನೆರವೇರಿಸಲಾಯಿತು. ನವರಾತ್ರಿಯ ನಾಲ್ಕನೇ ದಿನವಾದ ಗುರುವಾರ ರಾತ್ರಿ ದೇವಿಗೆ ಅದ್ಧೂರಿಯಾಗಿ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಲತಾ ಪೂಜೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು ಸಂತರಪಟ್ಟರು.
ನವರಾತ್ರಿ ಪ್ರಯುಕ್ತ ಚಾಮುಂಡೇಶ್ವರಿ ದೇವಿಯ ಮಹತ್ವವನ್ನು ಬಿಂಭಿಸುವ ತರಬೇತಿ ಪಡೆದ ಮಕ್ಕಳ ನೃತ್ಯ ಪ್ರದರ್ಶನ ನೆರೆದಿದ್ದ ಭಕ್ತರಿಗೆ ಮನರಂಜನೆ ಜೊತೆಗೆ ರೋಮಾಂಚನ ಉಂಟುಮಾಡಿತು. ಇನ್ನು ಜಿಲ್ಲಾಧಿಕಾರಿಗಳು ಸಹ ಮಕ್ಕಳು ಸಂಭ್ರಮ ಕಂಡು ಸಂತಸ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷದಿಂದ ಕೋವಿಡ್ ಇದ್ದ ಕಾರಣ ನವರಾತ್ರಿ ಸಂಭ್ರಮವನ್ನು ಸರಳವಾಗಿ ನಡೆಸಲಾಗಿತ್ತು. ಆದರೆ ಈ ಸಲ ಅದ್ದೂರಿಯಾಗಿ ಆಚರಿಸುವ ಮೂಲಕ ಭಕ್ತ ಸಮೂಹ ಸಂಭ್ರಮಿಸುವಂತೆ ಮಾಡಿದ್ದು, ವಿಶೇಷವಾಗಿತ್ತು.
Kshetra Samachara
29/09/2022 11:03 pm