ವರದಿ- ಬಲರಾಮ್ ವಿ
ಬೆಂಗಳೂರು: ಅನಾಥಶ್ರಮದ ಮಕ್ಕಳು ಹಾಗೂ ಸಾರ್ವಜನಿಕರೊಂದಿಗೆ ಅನ್ನದಾನದ ಜೊತೆಗೆ ಕಲಿಕಾ ಸಾಮಗ್ರಿಗಳು, ದಿನಸಿ ಪದಾರ್ಥಗಳು, ಬಟ್ಟೆಗಳನ್ನು ವಿತರಿಸುವ ಮೂಲಕ ಸರಿಗಮಪ ಖ್ಯಾತಿಯ ಜ್ಞಾನ ತಮ್ಮ ಆರನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾಳೆ.
ಕೆ.ಆರ್.ಪುರ ಸಮೀಪದ ಜೀವಿತಾ ಅನಾಥಾಶ್ರಮ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಹಾಗೂ ದಿನಸಿ ಪದಾರ್ಥಗಳು ಹಾಗೂ ಮಕ್ಕಳಿಗೆ ಊಟ ವಿತರಿಸಲಾಯಿತು. ಈ ವೇಳೆ ಪುಟಾಣಿ ಜ್ಞಾನ ತಮ್ಮ ಗಾಯನದ ಮೂಲಕ ಆಶ್ರಮದ ಮಕ್ಕಳನ್ನು ರಂಜಿಸಿದರು.
ನಂತರ ವೈಟ್ ಫೀಲ್ಡ್ ಸಮೀಪದ ಎಕೆಜೆ ಕಾಲೋನಿಯಲ್ಲಿ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ಹಾಗೂ ಕಂಬಳಿ ವಿತರಣೆ, ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ವಿತರಣೆ ಕಾರ್ಯಕ್ರಮದೊಂದಿಗೆ ತಮ್ಮ ಏರಿಯಾಗೆ ಆಗಮಿಸಿದ ಜ್ಞಾನರನ್ನು ಏರಿಯಾದ ಜನರು ತಮಟೆ ವಾದ್ಯಗಳ ಮೂಲಕ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮತ್ತಿತರರು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಬಗ್ಗೆ ಬರ್ತ್ ಡೇ ಗರ್ಲ್ ಜ್ಞಾನ ಹಾಗೂ ಇನ್ನಿತರೆ ಗಣ್ಯರು ಮಾತನಾಡಿ ಸಂತಸ ವ್ಯಕ್ತಪಡಿಸಿದರು.
PublicNext
26/09/2022 08:08 am