ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಲಿರೈಡ್ ಮೋಜು ಮಸ್ತಿಗಾಗಿ ಬೈಕ್ಸ್ ಕದಿಯುತ್ತಿದ್ದ ಇಬ್ಬರು ಖದೀಮರ ಬಂಧನ

ಯಲಹಂಕ:ಬೆಂಗಳೂರು ಈಶಾನ್ಯ ವಿಭಾಗದ ಕೊತ್ತನೂರು ಪೊಲೀಸರು ಇಬ್ಬರು ಹೈಷಾರಾಮಿ ಬೈಕ್ಗಳ್ಳನ್ನು ಕದಿಯುತ್ತಿದ್ದ ಖತರ್ನಾಕ್ಗಳನ್ನ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ರಾಮೂರ್ತಿನಗರದ ಪ್ರಶಾಂತ್ ಮತ್ತು ಕೃಷ್ಣರಾಜಪುರದ ಮೊಹ್ಮದ್ ರೋಷನ್ ನನ್ನ ಬಂಧಿಸಲಾಗಿದೆ.

ಇಬ್ಬರು ಕಳ್ಳರು ಮೋಜು ಮಸ್ತಿಗಾಗಿ 14ಲಕ್ಷ ಬೆಲೆಯ 11ಹೈಷಾರಾಮಿ ಬೈಕ್ಗಳನ್ನು ಕದ್ದು, ಎಂಜಾಯ್ ಮಾಡ್ತಿದ್ದರು. ಇವರ ವಿರುದ್ಧ ಬೆಂಗಳೂರು ಪೂರ್ವ, ಗ್ರಾಮಾಂತರ ಮತ್ತು ಈಶಾನ್ಯ ವಿಭಾಗಗಳಲ್ಲಿ 10ಕ್ಕುಹೆಚ್ಚು ಪ್ರಕರಣ ದಾಖಲಾಗಿವೆ. ಕೊತ್ತನೂರು, ಸಂಪಿಗೇಹಳ್ಳಿ, ಹೆಣ್ಣೂರು, ರಾಮೂರ್ತಿನಗರ, ಕೆ.ಜಿ.ಹಳ್ಳಿ, ಪುಲಕೇಶಿನಗರ, ಆವಲಹಳ್ಳಿ ಪೊಲೀಸರು ಇದೀಗ ಬೈಕ್ ಕಳ್ಳತನ ಪ್ರಕರಣಗಳ ಪರಿಶೀಲನೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದ ಬೈಕ್ ಗಳನ್ನು ಮಾಲೀಕರಿಗೆ ಒಪ್ಪಿಸುವ ಕೆಲಸವೂ ಮುಂದುವರೆದಿದೆ.

Edited By : Nirmala Aralikatti
Kshetra Samachara

Kshetra Samachara

12/10/2022 12:54 pm

Cinque Terre

5.89 K

Cinque Terre

0

ಸಂಬಂಧಿತ ಸುದ್ದಿ