ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರೀತಿಯ‌ ಮದುವೆಗೆ ಜಾತಿ ಅಡ್ಡಿಯಾಗಲಿಲ್ಲ: ಆಸ್ತಿ ವ್ಯಾಮೋಹಕ್ಕೆ ಹೆಂಡತಿ ಜೀವ ಉಳಿಯಲಿಲ್ಲ..

ಬೆಂಗಳೂರು: ಈ ಫೋಟೋದಲ್ಲಿ ಕಾಣ್ತಿರುವ ಈ ಮಹಿಳೆ ಹೆಸರು ಆರತಿ ಅಂತ. ವಯಸ್ಸಿನ್ನು 34 ವರ್ಷ. ಇನ್ನು ಮಗನ ಜೊತೆ ಪೋಸ್ ನೀಡ್ತಿರೋ ಈತನೇ ಆರತಿ ಗಂಡ ಚೇತನ್. ಈ ದಂಪತಿಗೆ 11 ವರ್ಷದ ಲಿಖಿತ್ ಎಂಬ ಮುದ್ದಾದ ಮಗನಿದ್ದಾನೆ. ಈ ಆರತಿ ಮತ್ತು ಚೇತನ್ ಬೇರೆ ಬೇರೆ ಜಾತಿಯವರಾದರೂ ಪ್ರೀತಿ ಇಬ್ಬರನ್ನು ಒಂದು‌ ಮಾಡಿತ್ತು. ಆದರೆ ಚೇತನ್ ನ ಆಸ್ತಿ ವ್ಯಾಮೋಹ ಆರತಿ ನೇಣು ಬಿಗಿದುಕೊಂಡು ಸಾವನ್ನಪ್ಪಲು ಕಾರಣವಾಯ್ತಾ ಎಂದು ಆರತಿ ಪೋಷಕರು ಅಳಿಯನ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಆರತಿ ನೇಣು ಬಿಗಿದುಕೊಂಡ್ರೆ ಕಾಲುಗಳು ಎರಡು ಅಡಿಯಷ್ಟು ಹಾಸಿಗೆ ಮೇಲೆ ಇರಲು ಸಾಧ್ಯವೇ? ಸಾಧ್ಯವಿಲ್ಲ. ಕೃತ್ಯದ ನಂತರ ಗಂಡ ಚೇತನ್ ಊರು ಬಿಟ್ಟು ಪರಾರಿಯಾಗಿದ್ದಾನೆ. ಜೊತೆಗೆ ಪೊಲೀಸರು ಸಹ ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಆರತಿ ದೊಡ್ಡಬಳ್ಳಾಪುರದ ESSILOR ಲೆನ್ಸ್ ತಯಾರಿಕಾ ಕಂಪನಿಲಿ ಕೆಲಸ ಮಾಡ್ಕೊಂಡು ಒಳ್ಳೆ ಸಂಬಳ ತೆಗೆದುಕೊಳ್ತಿದ್ದಳು. 14 ವರ್ಷಗಳ ಹಿಂದೆ ಇವರಿಬ್ಬರು ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ರು. ಮೂರು ಹೆಣ್ಣುಮಕ್ಕಳಿದ್ದ ಕಾರಣ ಆರತಿ ತಂದೆ ತಲಾ ಒಂದೊಂದು ಎಕರೆ ದಾನಪತ್ರ ಮಾಡಿದ್ದರು. ಇದರ ಮೇಲೆ ಕಣ್ಣಾಕಿದ್ದ ಗಂಡ ಚೇತನ್ ಜಮೀನು ಮಾರಾಟಕ್ಕೆ ಆರತಿ ಪೀಡಿಸಿ ಜಗಳ ಮಾಡಿದ್ದ. ಹೆಂಡತಿ ಒಪ್ಪದಿದ್ದ ಕಾರಣ ಕೊಂದು ನೇಣು ಹಾಕಿರಬಹುದು ಎಂಬ ಅನುಮಾನ ದಟ್ಟವಾಗಿ ಎಲ್ಲರನ್ನು ಕಾಡ್ತಿದೆ. ಆದರೆ ಈ ಬಗ್ಗೆ ಆರತಿ ಮಾವ ಇದೆಲ್ಲಾ ಸುಳ್ಳು ಎಂದು ತಳ್ಳಿಹಾಕಿದ್ದಾರೆ.

ಯಲಹಂಕ ಶಾಸಕ ವಿಶ್ವನಾಥ್ ರ ಗ್ರಾಮದಲ್ಲಿನ ಘಟನೆ ಜನರನ್ನು ಆಶ್ಚರ್ಯಕ್ಕೆ ದೂಡಿದೆ. ಗಂಡ ಚೇತನ್ ಎಸ್ಕೇಪ್ ಆಗಿರುವುದು, ಆರತಿ ಕಾಲ್ಗಳು ಹಾಸಿಗೆ ಮೇಲೆ ಇರುವುದು ಇವೆಲ್ಲಾ ಅಂಶ ಆರತಿಯದು ಆತ್ಮಹತ್ಯೆಯಲ್ಲ, ಕೊಲೆ ಎಂಬುದನ್ನು ಪುಷ್ಠೀಕರಿಸುತ್ತವೆ. ಅದೇನೆ ಆರೋಪಗಳಿದ್ದರು ರಾಜಾನುಕುಂಟೆ ಪೊಲೀಸರ ತನಿಖೆಯಿಂದ ದುರಂತದ ಸತ್ಯಾಸತ್ಯತೆ ತಿಳಿಯಬೇಕಿದೆ.

Edited By : Manjunath H D
PublicNext

PublicNext

08/10/2022 08:42 pm

Cinque Terre

42.6 K

Cinque Terre

0

ಸಂಬಂಧಿತ ಸುದ್ದಿ