ಆತ ಸಾಫ್ಟ್ ವೇರ್ ಎಂಜಿನಿಯರ್ ಇಬ್ಬಿಬ್ರು ಹುಡುಗಿರು ಕೈ ಕೊಟ್ಟಿದ್ರು, ಡೇ ಆಂಡ್ ನೈಟ್ ಅಂತ ಹಳೇ ಹುಡುಗಿ ನೆನಪಲ್ಲಿ ಹಾಫ್ ಮೆಂಟಲ್ ಆಗಿ ತಿರುಗುತ್ತಿದ್ದವನು ಮಾಡಿರೋ ಕೆಲಸಕ್ಕೆ ಪೊಲೀಸ್ರ ನಿದ್ದೆಗೆಟ್ಟು ಸದ್ಯ ಆತನನ್ನು ಜೈಲಿಗಟ್ಟಿದ್ದಾರೆ.
ಹೌದು ಈ ಹಾಫ್ ಪಾಗಲ್ ಪ್ರೇಮಿ ಹೆಸ್ರು ಪ್ರಶಾಂತ ಮೂಲತಃ ತಮಿಳುನಾಡಿನವನು. ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈ ಪ್ರಶಾಂತ ನಿನ್ನೆ ಚೀಫ್ ಸೆಕ್ರೆಟರಿ ಕಚೇರಿಗೆ ಮೂರು ಬಾರಿ ಕಾಲ್ ಮಾಡಿದ್ದಾನೆ. ವಿಧಾನಸೌಧಕ್ಕೆ ಬಾಂಬ್ ಇಡಲಾಗಿದೆ ಇನ್ನು ಕೆಲವೇ ಹೊತ್ತಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತೆ ಅಂತ ಬೆದರಿಸಿದ್ದ. ತಕ್ಷಣ ಹೆದರಿದ ಪೊಲೀಸ್ರು ವಿಧಾನಸೌಧವನ್ನ ತಡಕಾಡಿದ್ರೂ ನೋ ಯೂಸ್. ಯಾಕಂದ್ರೆ ಅದು ಹುಸಿಬಾಂಬ್ ಕರೆ.ಹುಸಿ ಬಾಂಬ್ ಕರೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಧಾನ ಸೌಧ ಪೊಲೀಸ್ರು ಯಾವ ನಂಬರ್ ನಿಂದ ಕರೆ ಬಂದಿತ್ತು ಅನ್ನೋದನ್ನ ಟ್ರ್ಯಾಕ್ ಮಾಡಿದ್ದರು. ಈ ವೇಳೆ ಪ್ರಶಾಂತ ಹೆಬ್ಬಗೋಡಿಯ ನಿವಾಸದಲ್ಲಿರೋ ಖಾತ್ರಿಯಾಗಿತ್ತು. ತಕ್ಷಣ ಪ್ರಶಾಂತನನ್ನ ಬಂಧಿಸಿ ಹೆಚ್ಚಿನ ವಿಚಾರಣೆಯನ್ನ ಕೈಗೊಳ್ಳಲಾಯ್ತು.
ಈ ವೇಳೆ ತಾನು ಲವ್ ಫೇಲ್ಯುರ್ ನಿಂದ ಮಾನಸಿಕ ಖಿನ್ನತೆಗೊಳಗಾಗಿದ್ದೆ. ಮೊದಲಿನವಳು ಸ್ಮಾರ್ಟ್ ಇಲ್ಲ ಅನ್ನೋ ರೀಸನ್ ಕೊಟ್ಟು ಬಿಟ್ಟೋದ್ರೆ, ಇನ್ನೊಬ್ಳು ನಿನ್ನ ತಲೆ ಬಾಂಡ್ಲಿ ಅಂತ ಬಿಟ್ಟೊಗಿದ್ಲಂತೆ. ಇದೇ ಕಾರಣಕ್ಕೆ ವಿಧಾನಸೌಧದಲ್ಲಿ ಬಾಂಬ್ ಇದೆ ಅನ್ನೋ ಬೆದರಿಕೆ ಕರೆ ಮಾಡಿದ್ದೀನಿ ಅಂತ ತಪ್ಪೊಪ್ಪಿಕೊಂಡಿದ್ದಾನೆ.
ಎಣ್ಣೆ ಏಟಲ್ಲಿ ಹುಸಿ ಬಾಂಬ್ ಕರೆಯನ್ನ ಮಾಡೋರನ್ನ ನೋಡಿರ್ತೀರಿ. ಆದ್ರೆ, ಪ್ರಶಾಂತ ಲವ್ವರ್ ಇಲ್ಲದ ಫೀವರ್ ನಿಂದ ಬಳಲಿ ಫೋನ್ ಕಾಲ್ ಮಾಡಿ ತಗಲ್ಲಾಕ್ಕೊಂಡಿದ್ದೂ ನಿಜಕ್ಕೂ ಹಾಸ್ಯಾಸ್ಪದವೇ ಸರಿ.
PublicNext
08/10/2022 08:41 pm