ಮುಂಜಾನೆ ಎದ್ದು ಬೈಕ್ ನಲ್ಲಿ ಏರಿಯಾ ರೌಂಡ್ ಹಾಕ್ತಿದ್ದ ಆತ, ಅಂಗಡಿ ಮುಂದೆ ಇರೋ ಹಾಲು ಮತ್ತು ಮೊಸರನ್ನು ಕದೀತಿದ್ದ. ಕ್ರೇಟ್ ನಲ್ಲಿರೋ ಹಾಲಿನ ಪ್ಯಾಕೇಟ್ ಕದ್ದು ಸ್ವಲ್ಪ ಸಮಯದ ನಂತರ ಮತ್ತೆ ಅದೇ ಅಂಗಡಿಗಳಿಗೆ ಮಾರಾಟ ಮಾಡಲು ಬಂದಾಗ ಲಾಕ್ ಆಗಿದ್ದಾನೆ.
ಕಳೆದ ಕೆಲ ದಿನಗಳಿಂದ ಹಾಲು ಕಳ್ಳತನ ಆಗ್ತಿರೋ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಅಂಗಡಿಯವರು ಸಿಸಿ ಟಿವಿ ಮೊರೆ ಹೋಗಿ ಕೊನೆಗೂ ಹಾಲಿನ ಕಳ್ಳನನ್ನು ಹಿಡಿದಿದ್ದಾರೆ.
ಸಿಸಿ ಟಿವಿಯ ಅರಿವಿಲ್ಲದೆ ಕದ್ದ ಹಾಲನ್ನು ಕಳವು ಮಾಡಿ ಅದೇ ಅಂಗಡಿಗೆ ಮಾರಲು ತಂದಾಗ ಹಿಡಿದು ಥಳಿಸಿದ್ದಾರೆ. ಸಿ.ಕೆ. ಕುಮಾರ್ ಎಂಬಾತ ಕಳವು ಮಾಡುತ್ತಿದ್ದ ವ್ಯಕ್ತಿಯಾಗಿದ್ದಾನೆ. ಈತ ವಿನೋದ್, ಅರುಣ್, ಸುರೇಶ ಅವರ ಅಂಗಡಿಗಳ ಮುಂದೆ ಕಳವು ಮಾಡಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಆರೋಪಿಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಅಂಗಡಿಗಳ ಮಾಲಿಕರು ಒಪ್ಪಿಸಿದ್ದಾರೆ.
PublicNext
06/10/2022 07:17 pm