ಬೆಂಗಳೂರು: ತಂಟೆ ತಕರಾರು ಮಾಡಿಕೊಂಡು ಓಡಾಡಿಕೊಂಡಿದ್ದ ಆ ಯುವಕನನ್ನ ಅಡ್ಡಗಟ್ಟಿ ಯುವಕರ ತಂಡವೊಂದು ಮನಸೋ ಇಚ್ಚೆ ಕೊಚ್ಚಿ ಪರಾರಿಯಾಗಿದ್ದ ಟೀಂ ಪೊಲೀಸ್ರ ಬಲೆಗೆ ಬಿದ್ದಿದೆ.
ಕಳೆದ ತಿಂಗಳ 27ನೇ ತಾರೀಕಿನ ನಡುರಾತ್ರಿಯಲ್ಲಿ ಬಾಪೂಜಿನಗರದಲ್ಲಿ ಶೋಹೆಬ್‌ನ ಕೈಯನ್ನ ದುಷ್ಕರ್ಮಿಗಳು ಕಟ್ ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನ ದಾಖಲಿಸಿಕೊಂಡ ಬ್ಯಾಟರಾಯನಪುರ ಪೊಲೀಸ್ರು ಇದೀಗ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಮುಬಾರಕ್ ಖಾನ್, ಮಹಮ್ಮದ್ ಸಲೀಂ, ಅಬೂಬಕ್ಕರ್ ಸಿದ್ದಿಕಿ ಎಂಬ ಆರೋಪಿಗಳ ಕೈಗೆ ಕೋಳ ತೊಡಿಸುವಂತಹ ಕೆಲಸವನ್ನ ಮಾಡಲಾಗಿದೆ. ಇಲ್ಲಿ ಈ ಮಾರಣಾಂತಿಕ ಹಲ್ಲೆಯ ಹಿಂದೆ ಎರಡು ರೀಸನ್ ಗಳು ಆರೋಪಿಗಳನ್ನ ಹುರಿದುಂಬಿಸಿತ್ತು.
ಹಲ್ಲೆಗೊಳಗಾದ ಶೋಹೆಬ್ ತನ್ನ ಚಿಕ್ಕಪ್ಪನ ಫ್ಯಾಕ್ಟರಿಯನ್ನ ನೋಡಿಕೊಂಡಿದ್ದ. ಹೀಗಿದ್ದ ಶೋಹೆಬ್ ಆರೋಪಿ ಮುಬಾರಕ್ ನ ಹೆಂಡತಿಯ ತಂಗಿಯನ್ನ ಚುಡಾಯಿಸ್ತಿದ್ದ. ಅಷ್ಟೇ ಅಲ್ಲ ಪ್ರೀತ್ಸೇ ಪ್ರೀತ್ಸೇ ಅಂತ ಪೀಡಿಸೋಕೆ ಶುರುಮಾಡಿದ್ದ. ಯಾವಾಗ ಶೋಹೆಬ್ ತನ್ನ ಪತ್ನಿಯ ತಂಗಿಯನ್ನೇ ಚುಡಾಯಿಸೋಕೆ ಶುರುವಾದ್ನೋ ಮುಬಾರಕ್ ನ ಕೋಪ ಎಲ್ಲೆ ಮೀರಿತ್ತು. ಇದೇ ಟೈಮಲ್ಲಿ ಶೋಹೆಬ್ ಮುಬಾರಕ್ನ ಸಂಬಂಧಿ ಜ್ಹಿಲನ್ ಎಂಬಾತನ ಮೇಲೆ ತನ್ನ ಗ್ಯಾಂಗ್ ಕರೆದುಕೊಂಡು ಬಂದು ಹಲ್ಲೆಯನ್ನ ನಡೆಸಿದ್ದ. ಬೆಂಕಿಗೆ ತುಪ್ಪ ಸುರಿದಂತೆ ಕೆಂಡಾಮಂಡಲನಾದ ಮುಬಾರಕ್ ತನ್ನ ಸಂಗಡಿಗರಾದ ಮಹಮ್ಮದ್ ಸಲೀಂ ಹಾಗೂ ಅಬೂಬಕ್ಕರ್ ನನ್ನ ಸೇರಿಸಿಕೊಂಡು ಶೋಹೆಬ್ ನನ್ನ ಕೊಲೆಗೈಯಲು ಪ್ಲ್ಯಾನ್ ರೂಪಿಸಿ ಅಟ್ಯಾಕ್ ಕೂಡ ಮಾಡಿಸಿದ್ದ ಅದೃಷ್ಟವಶಾತ್ ಶೋಹೆಬ್ ಬಚಾವಾಗಿದ್ದಾನೆ ಅಷ್ಟೇ.
Kshetra Samachara
04/10/2022 03:18 pm