ಬೆಂಗಳೂರು: 30 ರಾಬರಿ ಮಾಡಿ 3 ವರ್ಷದಿಂದ ನಾಪತ್ತೆಯಾಗಿದ್ದ ಆರೋಪಿಯನ್ನ ಅಶೋಕ್ ನಗರ ಪೊಲೀಸ್ರು ಕೊನೆಗೂ ಬಂಧಿಸಿದ್ದಾರೆ. ಕುಖ್ಯಾತ ರಾಬರಿಕೋರ ಆಸಿಫ್ ಖಾನ್ @ ಪಿಸ್ತೂಲ್ ಎಂಬಾತನೇ ಬಂಧಿತ ಆರೋಪಿ.
ಅಶೋಕನಗರ, ಬಸವನಗುಡಿ, ಕಬ್ಬನ್ ಪಾರ್ಕ್, ಕಮರ್ಷಿಯಲ್ ಸ್ಟ್ರೀಟ್ ಸದಾಶಿವನಗರ ವಿಧಾನಸೌಧ ಶೇಷಾದ್ರಿಪುರಂ ಠಾಣೆ ವ್ಯಾಪ್ತಿಯಲ್ಲಿ ರಾಬರಿ ಎಸಗಿದ್ದ ಆಸೀಫ್ ಕಳೆದ ಮೂರು ವರ್ಷಗಳಿಂದ ಖಾಕಿ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸ್ತಿದ್ದ. ಆರೋಪಿ ಪತ್ತೆಗಾಗಿ ನ್ಯಾಯಾಲಯದಿಂದ ವಾರೆಂಟ್ ಸಜ ಜಾರಿಯಾಗಿತ್ತು.
ಲೈವ್ ಬ್ಯಾಂಡ್ ಶೋಕಿಗೆ ರಾಬರಿ ಮಾಡ್ತಿದ್ದ ಆಸೀಫ್ ಕೃತ್ಯದ ನಂತರ ಬರ್ತಿದ್ದ ಹಣವನೆಲ್ಲ ಶೋಕಿ ಮಾಡಿ ಉಡೀಸ್ ಮಾಡ್ತಿದ್ದ.ದುಡ್ಡು ಖಾಲಿ ಆದ್ಮೆಲೆ ಮತ್ತೆ ಫೀಲ್ಡಿಗಿಳಿದು ರಾಬರಿ ಮಾಡ್ತಿದ್ದ. ಬೆಂಗಳೂರಿನ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿಯೇ 30 ರಾಬರಿ ಕೇಸ್ ಮಾಡಿದ್ದ ಈ ತಿಂಗಳಿಗೊಂದರಂತೆ ಮೂರು ಕೇಸ್ ನಂತೆ ವರ್ಷಕ್ಕೆ 30 ರಾಬರಿ ಮಾಡಿಪದೇ ಪದೇ ಮೊಬೈಲ್ ಸಿಮ್ ಬದಲಾಯಿಸುತ್ತಿದ್ದ. ಮೂಲತ: ಆರ್.ಟಿ ನಗರದ ನಿವಾಸಿಯಾಗಿರುವ ಆರೋಪಿ ಆಸೀಫ್ ಕೊರ್ಟ್ ನಿಂದ ವಾರೆಂಟ್ ಇಶ್ಯೂ ಆಗಿರೋದು ಗೊತ್ತಾಗ್ತಿದ್ದಂತೆ ಬಾಡಿಗೆ ಮನೆಗಳನ್ನ ಚೇಂಜ್ ಮಾಡ್ತಿದ್ದ.
ಸದ್ಯ ಕಳೆದ ವಾರ ಹೆಣ್ಣೂರುಬಂಡೆ ಬಳಿ ಸಂಬಂಧಿಕರ ಮನೆಯಲ್ಲಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ಆರೋಪಿ ಪತ್ತೆಗಾಗಿ ಮೊಬೈಲ್ ಟವರ್ ಡಂಪ್ ಹಾಗೂ ಕಾಲ್ ಸಿಡಿಆರ್ ಹಾಕೊಂಡ್ರು ಯಾವ್ದೆ ಪ್ರಯೋಜನ ಆಗಿರಲಿಲ್ಲ. ಆಸೀಫ್‌ನ ಹಳೆ ಸಹಚರರು ಹೆಣ್ಣೂರಿನಲ್ಲಿ ಇರುವ ಮಾಹಿತಿ ಕೊಟ್ಟಿದ್ರು. ಅದರಂತೆ ಸಂಬಂಧಿಕರ ಮನೆಯಲ್ಲಿ ಅಡಗಿದ್ದ ರಾಬರಿ ಆಸೀಫ್ ನನ್ನ ಪೊಲೀಸ್ರು ಲಾಕ್ ಮಾಡಿದ್ದಾರೆ.
PublicNext
02/10/2022 02:21 pm