ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪುಂಡ ಪೋಲಿಗಳ ತಾಣವಾಗ್ತಿದೆ ಗ್ರೌಂಡ್ ಗಳು..!

ಬೆಂಗಳೂರು: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಹಲವಾರು ಮೈದಾನಗಳಲ್ಲಿ ಅನೈತಿಕ‌ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿನ ರಸ್ತೆಗಳು ಸಹ ಪುಂಡ ಪೋಲಿಗಳ ತಾಣವಾಗ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ..

ನಗರದಲ್ಲಿ ಎಷ್ಟೋ ಕಡೆ ಮೈದಾನಗಳಿರಲ್ಲ. ಆದ್ರೆ ಈ ಕ್ಷೇತ್ರದ ಒಂದು ವಾರ್ಡ್‌ಗೆ 2-3 ಗ್ರೌಂಡ್‌ಗಳು ಇವೆ. ಆದ್ರೆ ಅದ್ರಲ್ಲಿ 2 ಗ್ರೌಂಟ್‌ಗಳು‌ ಯೂಸ್ ಇಲ್ಲದಂತಾಗಿದೆ.

ಬೀದಿ ದೀಪದ ವ್ಯವಸ್ಥೆಯಿಲ್ಲ. ಕಾಲೇಜಿಗೆ ಓಡಾಡುವ ಮಕ್ಕಳಿರುತ್ತಾರೆ. ಆದ್ರೆ ಈ ಪುಂಡರುಗಳಿಂದ ಮಕ್ಕಳು ಓಡಾಡಲು ಸಹ ಭಯ ಪಡ್ತಿದ್ದಾರೆ. ಇನ್ನೂ ಕೆರೆಗಳ ಸುತ್ತ-ಮುತ್ತಾನೂ ಸಹ ರಕ್ಷಣೆ ಇಲ್ಲದಂತಾಗಿದೆ. ಪೊಲೀಸ್‌ನವರಿದ್ರು ಸಹ ಕ್ಯಾರೆ ಅನ್ನದ ಪುಂಡರು ಅಲ್ಲೇ ಧೂಮಪಾನ, ಮದ್ಯಪಾನ, ಗಾಂಜಾ, ಸೇವಿಸುತ್ತಾ ಕುಳಿತಿರುತ್ತಾರೆ. ಇನ್ನೂ ಕೆಂಗೇರಿಯ ಸುತ್ತ-ಮುತ್ತಾ ಎಲ್ಲ ಮೆಡಿಕಲ್ ಸ್ಟೋರ್‌ನವರಿಗೂ ಗಾಂಜಾ ಹೊಡೆಯುವವರು ನಶೆ ಮಾತ್ರೆಗಳನ್ನ ಕೊಡಿ ಎಂದು ಬೆದರಿಸುತ್ತಿದ್ದಾರಂತೆ.

ಆದಷ್ಟು ಬೇಗ ಅಧಿಕಾರಿಗಳು ಇದೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡು ಕ್ರಮ ಜರುಗಬೇಕಿದೆ.

ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By : Nagesh Gaonkar
PublicNext

PublicNext

29/09/2022 10:16 pm

Cinque Terre

34.66 K

Cinque Terre

0

ಸಂಬಂಧಿತ ಸುದ್ದಿ