ಬೆಂಗಳೂರು: ಯುವಕನಿಗೆ ಪೊಲೀಸರಿಂದ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು. ಪೊಲೀಸ್ರು ಚಿತ್ರ ಹಿಂಸೆ ನೀಡ್ತಿರೋದಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ,ಗೃಹ ಇಲಾಖೆ ,ಮಾನವ ಹಕ್ಕುಗಳ ಆಯೋಗಕ್ಕೆ ಯುವಕ ರಾಜೇಶ್ ಪತ್ರ ಬರೆದಿದ್ದಾನೆ.
ಪೊಲೀಸ್ರು ಸತತ 12 ದಿನ ಹಲ್ಲೆ ನಡಸಿದ್ದಾರೆ.ಮೈಮೇಲೆ ಮೂತ್ರ ಎರಚಿ,3 ದಿನ ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆಂದು ರಾಜೇಶ ಆರೋಪ ಮಾಡಿದ್ದಾನೆ.
ರಾಮಮೂರ್ತಿನಗರ ಪೊಲೀಸರ ಮೇಲೆ ಆರೋಪಮಾಡಿರುವ ಯುವಕ ಅದಕ್ಕೆ ಸಂಬಂಧಪಟ್ಟಂತೆ ಫೋಟೊ ಮತ್ತು ವಿಡಿಯೋ ಕೂಡ ಲಗತ್ತಿಸಿದ್ದಾನೆ.
ಕೋಳಿರಾಜ @ಪುಷ್ಪರಾಜ್ ಎಂಬಾತನ ಪ್ರಕರಣ ಒಪ್ಪಿಕೊಳ್ಳುವಂತೆ ಚಿತ್ರ ಹಿಂಸೆ ಮಾಡಿದ್ದಾರೆಂಬ ಆರೋಪ ಮಾಡಿದ್ದಾನೆ.
ಆದರೆ ಪೊಲೀಸರು ಮಾತ್ರ ಬೇರೆನೆ ಹೇಳ್ತಿದ್ದು.ರಾಜೇಶ್ ರಾಬರಿಗೆ ಯತ್ನ ಮಾಡಿದ್ದಾನೆ.ಹಾಗಾಗಿ ಪೊಲೀಸರು ಬಂಧಿಸುತ್ತಾರೆಂದು ಸುಳ್ಳು ಆರೋಪ ಮಾಡ್ತಿದ್ದಾನೆ.
ಈತನಿಗೆ ಮತ್ತೋರ್ವ ವ್ಯಕ್ತಿ ಜಗನ್ ಎಂಬಾತ ಸಹಾಯ ಮಾಡ್ತಿದ್ದಾನೆ.ಆತನ ಮೇಲೆ ಪ್ರಕರಣ ಸಂಬಂಧ 2018 ರಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.ಅದೇ ಜಿದ್ದಿಗೆ ಪೊಲೀಸರ ಮೇಲೆ ಆರೋಪ ಮಾಡ್ತಿದ್ದಾನೆ ಎನ್ನುತ್ತಿರುವ ಪೊಲೀಸರುಅದಕ್ಕೆ ಸಂಬಂಧ ಪಟ್ಟಂತೆ ಸಿಸಿಟಿವಿ ದೃಶ್ಯವಳಿ ಕೂಡ ಬಿಡುಗಡೆ ಮಾಡಿದ್ದಾರೆ.
ಒಂದು ವೇಳೆ ರಾಜೇಶ ಹಲ್ಲೆ ರಾಬರಿ ಮಾಡಿದ್ರೂ ಮೈಮೇಲೆ ಮೂತ್ರ ಹಾಕಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡೋದು ಎಷ್ಷರ ಮಟ್ಟಿಗೆ ಸರಿ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
PublicNext
29/09/2022 09:16 am