ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಣಕ್ಕಾಗಿ ಬಾಲಕನ ಅಪಹರಣ!; ಇಬ್ಬರು ಕಿಡ್ನ್ಯಾಪರ್ಸ್ ಬಂಧನ

ಬೆಂಗಳೂರು: ಬೆಂಗಳೂರು ನಗರ ಈಶಾನ್ಯ ವಿಭಾಗ ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಯತಾ ಟೆಕ್ ಪಾರ್ಕ್ ನ ಮಾನ್ಯತಾ ರೆಸಿಡೆನ್ಸಿಯಲ್ಲಿ ಸೆ. 2ರಂದು 14 ವರ್ಷದ ಬಾಲಕನ ಅಪಹರಣ ನಡೆದಿತ್ತು.

8 ತಿಂಗಳ ಹಿಂದೆ ಮನೆ ಕೆಲಸಕ್ಕೆ ಸೇರಿದ್ದ ಇಬ್ಬರು ಆರೋಪಿಗಳಾದ ಸುನಿಲ್ ಕುಮಾರ್ ಮತ್ತು ನಾಗೇಶ್ 14 ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಿದ್ದರು. 15 ಲಕ್ಷಕ್ಕೆ ಬೇಡಿಕೆ ಇಟ್ಟು, ಹಣ ಸಿಕ್ಕ‌ ಕೂಡಲೇ ಬಾಲಕನನ್ನು ಬಿಟ್ಟು ಎಸ್ಕೇಪ್ ಆಗಿದ್ದರು.

ಕೃತ್ಯ ನಡೆದ 20 ದಿನಗಳ ನಂತರ ಸಂಪಿಗೇಹಳ್ಳಿ ಪೊಲೀಸರು ಈ ಇಬ್ಬರು ಖದೀಮರನ್ನು ಬಂಧಿಸಿದ್ದಾರೆ.

ಮನೆ ಕೆಲಸಕ್ಕೆ ಸೇರಿಕೊಂಡ ಕೆಲವು ದಿನಗಳ ನಂತರ ಇಬ್ಬರು ಆರೋಪಿಗಳಿಗೆ ಹಣದ ಅವಶ್ಯಕತೆ ಹೆಚ್ಚಾಗಿತ್ತು. ಇದರಿಂದ ಆರೋಪಿಗಳು ಕಿಡ್ನ್ಯಾಪ್ ಗೆ ಪ್ಲಾನ್ ಮಾಡಿದ್ದರು. ಮನೆಯ ಎಲ್ಲಾ ಆಗುಹೋಗು ಅರಿತು ಬೇಸ್‌ ಮೆಂಟ್ ಮೂಲಕ ಬಂದು ಮನೆ ಮಾಲೀಕರ ಕಾರಿನಲ್ಲಿಯೇ ಬಾಲಕನ ಅಪಹರಣ ನಡೆದಿತ್ತು.

ಬೇಡಿಕೆಯಂತೆ 15 ಲಕ್ಷ ಹಣ ಕೊಟ್ಟು, ಮಗ ಮನೆ ಸೇರಿದ ಮೇಲೆ ಪೋಷಕರು ಸಂಪಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರು. ವಿಶೇಷ ತಂಡದ ಕಾರ್ಯಾಚರಣೆಯಿಂದ 20 ದಿನಗಳ ಬಳಿಕ ಆರೋಪಿಗಳ ಬಂಧನ ಆಗಿ, ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು ಕ್ರೆಟಾ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಈ 15 ಲಕ್ಷದಲ್ಲಿ 1.50 ಲಕ್ಷದ ಬೆಕೆ ಡ್ಯೂಕ್ ಬೈಕ್, 40 ಸಾವಿರ ಬೆಲೆಯ ಕೆನಾನ್ ಕ್ಯಾಮೆರಾ ಖರೀದಿಸಿದ್ದರು. ಮಾಡಿದ ತಪ್ಪಿನ ಫಲವಾಗಿ ಈ ಇಬ್ಬರು ಖದೀಮರು ‌ಈಗ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ.

- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ

Edited By : Shivu K
PublicNext

PublicNext

27/09/2022 03:55 pm

Cinque Terre

23.03 K

Cinque Terre

0