ದೇವನಹಳ್ಳಿ : 104 ಕೊಕೇನ್ ಕ್ಯಾಪ್ಸುಲ್‌ಗಳನ್ನ ನುಂಗಿ ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುತ್ತಿದ್ದ, ಪ್ರಯಾಣಿಕನನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ, ಆತನ ಹೊಟ್ಟೆಯಲ್ಲಿದ್ದ 13.6 ಕೋಟಿ ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ.
ಇಥಿಯೋಪಿಯದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನ ಬೆಂಗಳೂರು ಕಸ್ಟಮ್ಸ್ ಇಂಟೆಲಿಜೆನ್ಸ್ ಯುನಿಟ್(CIU) ಅಧಿಕಾರಿಗಳು ಸಂಶಯದ ವಿಚಾರಣೆ ನಡೆಸಿದ್ದಾಗ ಮಾದಕ ದ್ರವ್ಯ ಕಳ್ಳಸಾಗಾಣಿಕೆಯ ಪ್ರಕರಣ ಬೆಳಕಿಗೆ ಬಂದಿದೆ, ಬಂಧಿತ ವ್ಯಕ್ತಿ ಘಾನದ 53 ವರ್ಷದ ಬಾಹ್ ಅಂಪಾಡು ಕ್ವಾಡ್ವೋ ಎಂದು ತಿಳಿದು ಬಂದಿದೆ, ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯನ್ ಏರ್ಲೈನ್ಸ್ ಫ್ಲೈಟ್ ET 690 ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ.
ಸಂಶಯದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನ ಆಸ್ಪತ್ರೆಗೆ ಕರೆದ್ಯೂಯ್ದು ವೈದಕೀಯ ಸ್ಕ್ಯಾನ್ ಗೆ ಒಳಪಡಿಸಿದ್ದಾಗ, ಆತನ ಕಿಬ್ಬೊಟ್ಟೆಯಲ್ಲಿ ಕ್ಯಾಪ್ಸುಲ್ ಗಳನ್ನ ಗುರುತಿಸಿ, ಬಹಳ ಎಚ್ಚರಿಕೆಯಿಂದ 104 ಕ್ಯಾಪ್ಸುಲ್‌ಗಳನ್ನ ಹೊರಗೆ ತೆಗೆಯಲಾಗಿದೆ, ಮೂರು ದಿನದೊಳಗೆ ಕ್ಯಾಪ್ಸುಲ್ ಗಳನ್ನ ಹೊರಗೆ ತೆಗೆಯದಿದ್ದಲ್ಲಿ ಆತನ ಜೀವಕ್ಕೆ ಅಪಾಯ ಇತ್ತು ಒಂದು ವೇಳೆ ಹೊಟ್ಟೆಯೊಳಗೆ ಕ್ಯಾಪ್ಸುಲ್ ಗಳು ಒಡೆದಿದ್ರೆ ಜೀವಕ್ಕೆ ಕಂಠಕವಾಗುತ್ತಿತ್ತು.
ಆರೋಪಿಯಿಂದ ಒಟ್ಟು 1.2 ಕೆಜಿಯ 104 ಕ್ಯಾಪ್ಸುಲ್ ಗಳನ್ನ ವಶಕ್ಕೆ ಪಡೆಯಲಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 13.6 ಕೋಟಿ ಎಂದು ಅಂದಾಜಿಸಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
Kshetra Samachara
24/09/2022 03:45 pm