ಬೆಂಗಳೂರು : ಆತ ಮಲಯಾಳಂ ಕಿರುತೆರೆ ನಟ ಜೀವನಕ್ಕೆನೂ ಕಡಿಮೆ ಇರ್ಲಿಲ್ಲ. ಆದ್ರೂ ಶೋಕಿ ಜೀವನಕ್ಕೆ ದಾಸನಾಗಿದ್ದ ಆತ ಹಣ ಸಂಪಾದನೆಗೆ ಮಾದಕ ದಂಧೆಯ ರೂವಾರಿಯಾಗಿದ್ದ.
ಎಸ್ ಎಚ್ ಎಸ್ ಆರ್ ಲೇಔಟ್ ಪೊಲೀಸ್ರು ಮಾದಕ ದಂಧೆಯಲ್ಲಿ ತೊಡಗಿದ್ದ ಮಾಲಯಾಳಿ ಕಿರುತೆರೆ ನಟ ಸೇರಿ ಮೂವರನ್ನ ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 13 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ಸೀಜ್ ಮಾಡಿದ್ದಾರೆ.ಶಿಯಾಜ್, ಮಹಮ್ಮದ್ ಶಾಹಿದ್, ಮಂಗಲ್ ತೋಡಿ ಜಿತೀನ್ ಬಂಧಿತ ಆರೋಪಿಗಳಾಗಿದ್ದು ಬಂಧಿತರ ಪೈಕಿ ಶಿಯಾಜ್ ಮಲಯಾಳಂ ಕಿರುತೆರೆಯಲ್ಲಿ ಸಹನಟನಾಗಿ ಕೆಲಸ ಮಾಡಿಕೊಂಡಿದ್ದ.
ಮಹಮ್ಮದ್ ಶಾಹಿದ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಇನ್ನೂ ಆರೋಪಿಗಳು ಎಚ್ ಎಸ್ ಆರ್, ಕೋರಮಂಗಲ ಭಾಗದಲ್ಲಿನ ಪ್ರತಿಷ್ಠಿತ ಕಾಲೇಜುಗಳನ್ನ ಗುರಿಯಾಗಿಸಿಕೊಂಡು ಡ್ರಗ್ ವ್ಯವಹಾರ ನಡೆಸ್ತಿದ್ರು. ಕೇರಳದಿಂದ ಗಾಂಜ ಮತ್ತು ಎಂಡಿಎಂಎ ಪಿಲ್ಸ್ ತರಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡ್ತಿದ್ರು. ಇವ್ರ ಜೊತೆಗೆ ಪಡ್ಡೆ ಹುಡುಗರ ಪಾರ್ಟಿಗಳಿಗೂ ಈ ಗಾಂಜ ಮತ್ತು ಎಂಡಿಎಂಎ ಸಪ್ಲೈ ಮಾಡ್ತಿದ್ರು. ಸದ್ಯ ಬಂಧಿತರಿಂದ 191 ಗ್ರಾಂ ಎಂಡಿಎಂಎ ಹಾಗೂ 2.80ಕೆಜಿ ಗಾಂಜಾ ಸೀಜ್ ಮಾಡಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
PublicNext
23/09/2022 04:59 pm