ಇಸ್ಪೀಟ್ ಚಟ ಮೈಗಂಟಿಸಿಕೊಂಡಿದ್ದವನು ಹಣಕ್ಕಾಗಿ ಬರೋಬ್ಬರಿ 30 ಬೈಕ್ ಗಳನ್ನ ಕದ್ದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಶ್ರೀಧರ@ ಚಿಂಗಾರಿ ಬಂಧಿತ ಆರೋಪಿ. ನಗರದ ವಿವಿಧೆಡೆ ಮನೆ ಮುಂದೆ ನಿಲ್ಲಿಸಿರುವ ಬೈಕ್ ಗಳನ್ನ ಕದ್ದು ಅದನ್ನ ಮಾರಾಟ ಮಾಡಿ ಬಂದ ಹಣದಿಂದ ಮತ್ತೆ ಇಸ್ಪೀಟ್ ಗೆ ಹಾಕುತ್ತಿದ್ದ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣ ದಾಖಲಾದ ಬೆನ್ನಲ್ಲೇ ತನಿಖೆ ನಡೆಸಿದ ಪೊಲೀಸರು ಆರೋಪಿ ಶ್ರೀಧರನನ್ನ ಬಂಧಿಸಿ ಆತ ಕದ್ದಿದ್ದ 15 ಲಕ್ಷ ಮೌಲ್ಯದ 30 ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದಿದ್ದಾರೆ.
ಇನ್ನು ಈತನಿಂದ ಮತ್ತಷ್ಟು ಬೈಕ್ ಗಳು ರಿಕವರಿಯಾಗಬೇಕಾದ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
PublicNext
23/09/2022 04:12 pm