ಆನೇಕಲ್ : ಬೆಂಗಳೂರು ದಕ್ಷಿಣ ತಾಲ್ಲೂಕಿನ ಬ್ಯಾಟರಾಯನದೊಡ್ಡಿ ಕೆರೆಯಲ್ಲಿ ಮೀನುಗಳು ಮಾರಣಹೋಮ ವಿಚಾರ ಸಂಬಂಧಿಸಿದಂತೆ ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಲ್ಲಿನ ಬೆಂಗಳೂರು ದಕ್ಷಿಣ ತಾಲ್ಲೂಕಿನ ಬ್ಯಾಟರಾಯನದೊಡ್ಡಿಯಲ್ಲಿ ಕಳೆದ ಹಲವು ದಿನಗಳಿಂದ ಕೈಗಾರಿಕೆಗಳ ಕೆಮಿಕಲ್ ತ್ಯಾಜ್ಯದಿಂದ ಸಾವಿರಾರು ಮೀನುಗಳು ಸಾವನಪ್ಪಿವೆ ಅಂತ ಆರೋಪ ಕೇಳಿ ಬಂದಿತ್ತು ಜತಗೆ ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಗಿತ್ತು.
ಈ ಹಿನ್ನೆಲೆಯಲ್ಲಿ ಖುದ್ದಾಗಿ ತಹಶೀಲ್ದಾರ್ ಶಿವಪ್ಪ ರವರು ಭೇಟಿ ನೀಡಿ ಪರಿಶೀಲ ನಡೆಸಿದರು ಆಕ್ರಮವಾಗಿ ಕಾರ್ಯಚರಿಸುತ್ತಿದ್ದ ಬಟ್ಟೆಗಳಿಗೆ ಕ್ಲೋಸ್ ಮಾಡುವಂತೆ ತಹಶೀಲ್ದಾರ್ ಸೂಚನೆಯನ್ನು ನೀಡಿದರು
-ಹರೀಶ್ ಗೌತಮ ನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
21/09/2022 08:05 am