ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಂಧ್ರ ಪೊಲೀಸರ ಹೆಸ್ರಲ್ಲಿ ಕರ್ನಾಟಕ‌ ಉದ್ಯಮಿ ಕಿಡ್ನಾಪ್ ಮಾಡಿದ್ದ ನಕಲಿ ಪೊಲೀಸ್ ಗ್ಯಾಂಗ್

ಬೆಂಗಳೂರು:ಪಕ್ಕದ ಆಂದ್ರ ಮತ್ತು ರಾಜ್ಯದಲದಲಿ ಆಕ್ಟಿವ್ ಖತರ್ನಾಕ್ ಗ್ಯಾಂಗ್ ಪೊಲೀಸ್ ಅಧಿಕಾರಿ, ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮೆನ್ ಅಂತಾ ಹೇಳ್ಕೊಂಡು ಜನರನ್ನ ಪರಿಚಯ ಮಾಡ್ಕೋತಿದ್ರು. ದೊಡ್ಡ ದೊಡ್ಡ ಕುಳಗಳನೇ ಕ್ಯಾಚ್ ಹಾಕ್ತಿದ್ದ ಆರೋಪಿಗಳು ಪರಿಚಯ ಮಾಡಿಕೊಂಡವರಿಗೆ ನರಕ ತೋರಿಸ್ತಿದ್ರು.

ಪೊಲೀಸ್ ಆಫಿಸರ್ ಗಳು ಅಂತಾ ಹೇಳ್ಕೊಂಡು ದುಡ್ಡಿರೋರನ್ನ ಕಿಡ್ನಾಪ್ ಮಾಡಿ ಲಕ್ಷ, ಕೋಟಿ ಲೆಕ್ಕದಲ್ಲಿ ಹಣ ಸುಲುಗೆ ಮಾಡ್ತಿದ್ದ ಐವರು ಆರೋಪಿಗಳನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್, ಸತ್ಯನಾರಾಯಣ್, ನಾಗರಾವ್, ಶ್ರೀಧರ್, ಕಿರಣ್,ಬಂಧಿತ ಆರೋಪಿಗಳಾಗಿದ್ದಾರೆ.

ಅಂದ್ಹಾಗೆ ದುಡ್ಡಿರೋರನ್ನ ನೋಡಿ ಒಬ್ಬಬ್ಬರ ಬಳಿ ಒಂದೊಂದು ಹೆಸರೇಳಿ ಪರಿಚಯ ಮಾಡಿಕೊಳ್ತಿದ್ದ ಅರೋಪಿಗಳು ತಾವು ರಿಯಲ್ ಎಸ್ಟೇಟ್ ಬ್ರೋಕರ್ ಗಳು, ಪೊಲೀಸ್ ಅಧಿಕಾರಿಗಳು, ಅಂತಾ ಹೇಳಿಕೊಳ್ತಿದ್ರು. ಹೀಗೆ ಬೆಂಗಳೂರು ಮೂಲದ ವಸಂತಾ ಮತ್ತು ಶಿವರೆಡ್ಡಿ ಎಂಬುವರಿಗ ಕೆಲ ತಿಂಗಳ ಹಿಂದೆ ಹೈದ್ರಾಬಾದ್ ನಲ್ಲಿ ಹರೀಶ್ ಎಂಬ ಆರೋಪಿ ಪರಿಚಯ ಆಗಿದ್ದ. ಕಡಿಮೆ ರೇಟ್ ಗೆ ಜಮೀನು ಕೊಡಿಸೋದಾಗಿ ಭರವಸೆ ನೀಡಿ ಅದ್ರಂತೆ ಕಳೆದ ತಿಂಗಳು ಬೆಂಗಳೂರಿಗೆ ಬಂದಿದ್ದ ಆರೋಪಿ ಬ್ಯಾಟರಾಯನಪುರ ಠಾಣಾ‌ ವ್ಯಾಪ್ತಿಯಲ್ಲಿ ಮೀಟ್ ಆಗೋಕೆ ಅಂತಾ ವಸಂತಾ ಮತ್ತು ಶಿವಾರೆಡ್ಡಿಯನ್ನ ಕರೆದಿದ್ದಾನೆ.ಜಮೀನು ವಿಚಾರದ ಮಾತುಕತೆಗೆ ಅಂತಾ ಬಂದೋರನ್ನ ಸ್ಕೋಡಾ ಕಾರಿನಲ್ಲಿ ಕೂರಿಸ್ಕೊಂಡು ಚಿಕ್ಕಬಳ್ಳಾಪುರ ಕಡೆ ಕರೆದೊಯ್ದು ಕಿಡ್ನಾಪ್‌ ಮಾಡಿದ್ದಾನೆ.ನಂತರ ಹರೀಶ್ ಮತ್ತು ಗ್ಯಾಂಗ್ ಶಿವಾರೆಡ್ಡಿಯನ್ನ ಬೆತ್ತಲೆ ಮಾಡಿ ವಿಡಿಯೋ ಮಾಡಿಕೊಂಡು ಬ್ಲಾಕ್‌ ಮೇಲ್ ಮಾಡಿದ್ದಾರೆ.ವಸಂತಾಳನ್ನ ಬೆಂಗ್ಳೂರಿಗೆ ಕಳಿಸಿ 50 ಲಕ್ಷ ಹಣ ತೆಗೆದುಕೊಂಡ ಬರಲು ಹೇಳಿದ್ದಾರೆ.

ಹೇಗೋ ಸಾಲ ಸೂಲ ಮಾಡಿ ಹನ್ನೊಂದು ಲಕ್ಷ ಕೊಟ್ಟು ಆರೋಪಿಗಳಿಂದ ಬಿಡಿಸಿಕೊಂಡು ಬಂದಿದ್ದ ವಸಂತಾ ಹಾಗೂ ಶಿವಾರೆಡ್ಡಿ ಸೀದಾ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ರು. ಈ ಸಂಬಂಧ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಹೈದ್ರಬಾದ್ ನ ಜುಬ್ಲಿ ಹಿಲ್ಸ್ ಹೋಟೆಲ್ ನಲ್ಲಿ ಐವರನ್ನ ಬಂಧಿಸಿ ಕರೆ ತಂದಿದ್ದಾರೆ. ಇವ್ರಿಬ್ರಿಗಷ್ಟೇ ಅಲ್ಲಾ ಹಲವರಿಗೆ ಈ ಆರೋಪಿಗಳು ಕಿಡ್ನಾಪ್ ಮಾಡಿ ಲಕ್ಷಾಂತರ ರೂಪಾಯಿ, ಕೆಲವರ ಬಳಿ ಕೋಟ್ಯಾಂತರ ರೂಪಾಯಿ ಸುಲುಗೆ ಮಾಡಿರೋದು ಗೊತ್ತಾಗಿದೆ. ಆರೋಪಿಗಳ‌ ಬಳಿ ನಕಲಿ ಪೊಲೀಸ್ ಐ‌.ಡಿ, ಬಟ್ಟೆ ಎಲ್ಲವೂ ಸಿಕ್ಕಿದ್ದು ಸಾಕ್ಷಿ ಸಮೇತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Edited By : Shivu K
PublicNext

PublicNext

18/09/2022 12:22 pm

Cinque Terre

28.37 K

Cinque Terre

0

ಸಂಬಂಧಿತ ಸುದ್ದಿ