ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಯತಪ್ಪಿ ಬೈಕ್‌ನಿಂದ ಬಿದ್ದ ಸವಾರ, ರಸ್ತೆಯಲ್ಲಾ ಚೆಲ್ಲಿದ ಗೋಮಾಂಸ; ಸ್ಥಳೀಯರಿಂದ ಬೈಕ್‌ಗೆ ಬೆಂಕಿ

ದೊಡ್ಡಬಳ್ಳಾಪುರ :ಆಯತಪ್ಪಿ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ಬೈಕ್‌ನಲ್ಲಿ ಸಾಗಿಸುತ್ತಿದ್ದ ಗೋಮಾಂಸ ರಸ್ತೆಯಲ್ಲಿ ಚೆಲ್ಲಿದೆ, ಗೋಮಾಂಸ ಕಂಡ ಸ್ಥಳೀಯರು ಬೈಕ್‌ಗೆ ಬೆಂಕಿ ಇಟ್ಟು ಬೈಕ್ ಸವಾರನನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಕಳೆದ ರಾತ್ರಿ ಘಟನೆ ನಡೆದಿದ್ದು, ಹಿಂದೂಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬೈಕ್ ಸವಾರ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ, ಬೈಕ್ ನಲ್ಲಿ ಸಾಗಿಸುತ್ತಿದ್ದ ಗೋಮಾಂಸ ಸಹ ರಸ್ತೆಯಲ್ಲಿ ಚೆಲ್ಲಿದೆ, ಗೋಮಾಂಸ ಸಾಗಟ ಮಾಡುತ್ತಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು ಬೈಕ್ ಗೆ ಬೆಂಕಿ ಇಟ್ಟು ಬೈಕ್ ಸವಾರನನ್ನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

Edited By : Nagesh Gaonkar
PublicNext

PublicNext

17/09/2022 05:56 pm

Cinque Terre

33.84 K

Cinque Terre

2

ಸಂಬಂಧಿತ ಸುದ್ದಿ