ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿನ್ನಾಭರಣಕ್ಕೆ ಒಂಟಿ ಮಹಿಳೆ ಕೊಲೆ : ಆರೋಪಿಗಳು ಅಂದರ್

ಬೆಂಗಳೂರು : ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬಾಭವಾನಿ ನಗರದಲ್ಲಿ ವೃದ್ದೆ ಪ್ರಸನ್ನಕುಮಾರಿ ಎಂಬುವವರ ಕೊಲೆಯಾಗಿತ್ತು. ಕಳೆದ ಸೆಪ್ಟೆಂಬರ್ 8ರಂದು ಕೊಲೆ ಮಾಡಿ ಪರಾರಿಯಾಗಿದ್ದ ನಾಗೇಂದ್ರ ಮತ್ತು ರಾಮರಾಜ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ನವೋದಯ ಶಾಲಾ ಶಿಕ್ಷಕಿ ನಿವೃತ್ತಿ ನಂತರ ಒಂಟಿಯಾಗಿದ್ದರು. ಮಕ್ಕಳಿಲ್ಲದ ಪ್ರಸನ್ನಕುಮಾರಿ (68) ಕೆಲವು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದರು. ಈಕೆಯ ಅಸಹಾಯಕತೆಯನ್ನು ಮನಗಂಡ ದುರುಳರು ಸೀರೆಲಿ ಕೈಕಾಲು ಕಟ್ಟಿಹಾಕಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಆರೋಪಿ ನಾಗೇಂದ್ರ ವೃದ್ದ ಮಹಿಳೆಯ ಮನೆ ಎದುರು ವಾಸವಿದ್ದ. ಚಿನ್ನಾಭರಣ ಹಾಕಿಕೊಂಡು ಓಡಾಡುವ ಚಲನವಲನ ಗಮನಿಸಿದ್ದ. ಒಂಟಿಯಾಗಿ ವಾಸವಾಗಿದ್ದು, ಯಾರೂ ಬರದಿರುವುದನ್ನ ಗಮನಿಸಿ ಸ್ನೇಹಿತ ರಾಮರಾಜ್ ನನ್ನ ಕರೆಸಿ ಕೊಲೆಮಾಡಿ ಆಂದ್ರಕ್ಕೆ ಪರಾರಿಯಾಗಿದ್ದರು. ಇದೀಗ ಕೊಲೆಗಾರರನ್ನು ಬಂಧಿಸಲಾಗಿದೆ

ಕೊಲೆಯಾದ ಬಳಿದ ಆರೋಪಿಗಳು ಚಿನ್ನಾಭರಣ ಕದ್ದು ಆಂಧ್ರದ ರಾಯಚೋಟಿಲಿ ಮುತ್ತೂಟ್ ಪೈನಾನ್ಸ್ ನಲ್ಲಿ 1.90 ಲಕ್ಷಕ್ಕೆ ಮಾರಾಟ ಮಾಡಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ, ಆರೋಪಿಗಳ ಕುರಿತು ವಿದ್ಯಾರಣ್ಯ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.

Edited By : Nirmala Aralikatti
Kshetra Samachara

Kshetra Samachara

17/09/2022 12:17 pm

Cinque Terre

1.8 K

Cinque Terre

0