ಬೆಂಗಳೂರು: ರೋಲೆಕ್ಸ್, ಹ್ಯೂಬ್ಲೈಟ್, ರ್ಯಾಡೋ ಯಾವ ಬ್ರಾಂಡ್‌ನ ಯಾವ್ ವಾಚ್ ಬೇಕಾದ್ರು ಇಲ್ಲಿ ಅರ್ಧ ರೇಟು. ಕಡಿಮೆ ಅಂತ ಶಿವಾಜಿನಗರ ಸುತ್ತಮುತ್ತ ಯಾರಾದ್ರೂ ದುಬಾರಿ ವಾಚ್ ಖರೀದಿಸಿದ್ರೆ ಒಮ್ಮೆ ಚೆಕ್ ಮಾಡಿಕೊಳ್ಳಿ ಯಾಕಂದ್ರೆ ಈ ವಾಚ್ ಯಾವುದು ಅಸಲಿ ಅಲ್ಲ ನಕಲಿ ವಾಚ್‌ಗಳು. ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿ ಇಂಥದೊಂದು ದೊಡ್ಡ ನಕಲಿ ವಾಚ್ ಮಾರಾಟ ಮಳಿಗೆಯನ್ನು ಪತ್ತೆ ಮಾಡಿದೆ. ಸೈಯದ್ ಮೊಹಮ್ಮದ್ ಶಿವಾಜಿ ನಗರದಲ್ಲಿ ನಡೆಸ್ತಿದ್ದ ಅಂಗಡಿಯಲ್ಲಿ ದುಬಾರಿ ಬೆಲೆ ಬ್ರಾಂಡೇಡ್ ವ್ಯಾಚ್‌ಗಳು ಆಫ್ ರೇಟ್ ಮಾರಾಟವಾಗ್ತಿತ್ತು.
ಇನ್ನೂ ಈ ವಾಚ್‌ಗಳ ಎಂಆರ್‌ಪಿ ಬೆಲೆ ಕೋಟ್ಯಾಂತರ ರೂಪಾಯಿ ಆಗಿದ್ದು, ಅಸಲಿ ಮೂವತ್ತು ಲಕ್ಷ ರೂ. ಅಂತ ಸಿಸಿಬಿ ಪೊಲೀಸ್ರು ಅಂದಾಜಿಸಿದ್ದಾರೆ. ಬಂಧಿತನಿಂದ 83 ನಕಲಿ ವಾಚ್‌ಗಳು ಸೀಜ್ ಮಾಡಿದ್ದು, ಆರೋಪಿ ಬಾಂಬೆಯಿಂದ ಈ ವಾಚ್‌ಗಳನ್ನ ತರಿಸಿ ಮಾರಾಟ ಮಾಡ್ತಿದ್ದ ಎಂದು ತಿಳಿದು ಬಂದಿದೆ.
PublicNext
15/09/2022 05:06 pm