ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಮುಂದುವರೆಸಿದ ಲೋಕಾಯುಕ್ತ ಪೊಲೀಸರು, ದೂರುದಾರನಿಂದ ಲಂಚಕ್ಕೆ ಬೇಡಿಕೆಯಿಟ್ಟು ಹಣ ಪಡೆದುಕೊಳ್ಳುವಾಗ ರೆಡ್ ಹ್ಯಾಂಡಾಗಿ ಭ್ರಷ್ಟ ಅಧಿಕಾರಿಯನ್ನ ಲಾಕ್ ಮಾಡಿದ್ದಾರೆ.
ಬೆಂಗಳೂರು ಕಂದಾಯ ಭವನ ಕಚೇರಿಯಲ್ಲಿ ವಿಶೇಷ ಶಿರಸ್ತೇದಾರ್ ಆಗಿರುವ ಶ್ರೀಕಾಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ದೂರುದಾರದಿಂದ 45 ಸಾವಿರ ಲಂಚದ ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ.ಬಿಡಿಎಗೆ ಸಲ್ಲಿಸಲು ನೈಜತಾ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದ ದೂರುದಾರಿಗೆ ಪ್ರಮಾಣಪತ್ರ ನೀಡಲು ಶ್ರೀಕಾಂತ್ 13ಲಕ್ಷಕ್ಕೆ ಬೇಡಿಕೆ ಇಟ್ಟಿದರು.
PublicNext
15/09/2022 04:17 pm