ನೆಲಮಂಗಲ : ಒಂದು ಕಾರು ಇಟ್ಕೊಂಡು ಜೀವನಕ್ಕೆಂದು ಬಾಡಿಗೆಗೆ ಹೊಡಿಸುತ್ತಿದ್ದ ವ್ಯಕ್ತಿ ಯನ್ನು ಬಾಡಿಗೆಗೆ ಬರುವಂತೆ ಕರೆದೊಯ್ದು ಮಾರ್ಗಮಧ್ಯೆ ಹಿಂಬದಿಯಿಂದ ಚಾಲಕನ ಕುತ್ತಿಗೆಗೆ ಚಾಕಿವಿನಿಂದ ಇರಿದಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ದೊಡ್ಡದಾಳವಟ್ಟ ಗ್ರಾಮದಲ್ಲಿ ನಡೆದಿದೆ.
ಇನ್ನೂ ಕಾರು ಚಾಲಕ ಸಂಪತ್ ನನ್ನು ವೈದ್ಯ, ಧರ್ಮಸ್ಥಳಕ್ಕೆ ಹೋಗಬೇಕು ತನ್ನ ಹೆಂಡತಿ ದೊಡ್ಡದಾಳವಟ್ಟದಲ್ಲಿದ್ದಾರೆ ಎಂದು ಕರೆದೊಯ್ದ ಅಪರಿಚಿತ ವ್ಯಕ್ತಿ ಹಿಂಬದಿಯಿಂದ ಚಾಲಕನ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ವೇಳೆ ಗ್ರಾಮಸ್ಥರೇ ಅಪರಿಚಿತ ವ್ಯಕ್ತಿಯನ್ನ ಹಿಡಿದು ಕೊಡಿಗೇನಹಳ್ಳಿ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಕೊಡಿಗೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
-ಸುಮಿತ್ರ ಪಬ್ಲಿಕ್ ನೆಕ್ಸ್ಟ್ ನೆಲಮಂಗಲ
PublicNext
15/09/2022 09:25 am