ಬೆಂಗಳೂರು: ಟ್ಯೂಷನ್‌ಗೆ ಹೋಗ್ತೀನಿ ಅಂತಾ ಮನೆಯಿಂದ ಹೋದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ನಿನ್ನೆ ಮಂಗಳವಾರ ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿ ಪುನೀತ್ ಮನೆ ಬಿಟ್ಟು ಹೋಗಿದ್ದಾನೆ.
ಓಕಳಿ ಪುರಂ ಬಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ಹತ್ತನೇ ತರಗತಿ ಓದ್ತಿದ್ದ ಪುನೀತ್, ಓದೋದರಲ್ಲಿ ಕೊಂಚ ಹಿಂದೆ ಇದ್ದ ಪುನೀತ್ ಇತ್ತೀಚೆಗೆ ಮಿಡ್ ಟರ್ಮ್ ಎಕ್ಸಾಮ್‌ನಲ್ಲಿ ಫೇಲ್ ಆಗಿದ್ದ. ಈ ಬಗ್ಗೆ ಮನೆಯಲ್ಲಿ ಪೋಷಕರು ಬೈದು ಬುದ್ಧಿವಾದ ಹೇಳಿದ್ರು. ಪೋಷಕರು ಬೈದಿದ್ದರಿಂದ ಮನನೊಂದು ಮನೆ ಬಿಟ್ಟು ಹೋಗಿರೋ ಪುನೀತ್‌ಗಾಗಿ ಪೋಷಕರು ಹಪಹಪಿಸ್ತಿದ್ದಾರೆ. ಸದ್ಯ ಬ್ಯಾಡರಹಳ್ಳಿ ಠಾಣೆಗೆ ಈ ಕುರಿತು ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದು,ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿಗಾಗಿ ಪೊಲೀಸ್ರು ಹುಡುಕಾಟ ನಡೆಸ್ತಿದ್ದಾರೆ.
PublicNext
12/10/2022 09:53 pm