ಶಾಂತಿನಗರ: ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಎಂಟ್ರಿಕೊಟ್ಟ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ, ಅಕ್ರಮವಾಗಿ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುವ ಪಬ್ , ರೆಸ್ಟೋರೆಂಟ್‌ಗಳ ವಿರುದ್ದ ಸರಣಿ ದಾಳಿ ನಡೆಸ್ತಿದ್ದಾರೆ. ಮಿಡ್‌ನೈಟ್‌ನಲ್ಲಿ ಬಾರ್ ಪಬ್ ಗಳಿಗೆ ಶಾಕ್ ಕೊಟ್ಟಿರೋ ಡಿಸಿಪಿ ಪಬ್ ಮತ್ತು ಬಾರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಹೃದಯಭಾಗದ ಕೇಂದ್ರ ವಿಭಾಗದಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಿ ರೌಡಿ ಶೀಟರ್ ಗಳಿಗೆ ವಾರ್ನ್ ಮಾಡಿ ತಮ್ಮ ವಿಭಾಗದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕೊಡದೆ ಕಾನೂನು ಸುವ್ಯವಸ್ಥೆಯನ್ನ ಉತ್ತಮವಾಗಿ ನೊಡಿಕೊಳ್ಳುತ್ತಿರೋ ಡಿಸಿಪಿ ಶ್ರೀನಿವಾಸ್ ಗೌಡ. ಅದೇ ರೀತಿ ಸರ್ಕಾರದ ಆದೇಶದಂತೆ ಅಪ್ರಾಪ್ತರಿಗೆ ಮಧ್ಯ ಸರಬರಾಜು ಮಾಡಬಾರದು ಅಂತ ಇರುವ ಆದೇಶವನ್ನು ಕಟ್ಟುನಿಟ್ಟಗಿ ಅನುಷ್ಠನಗೊಳಿಸಿದ್ದಾರೆ.
ಸರ್ಕಾರದ ಆದೇಶವನ್ನು ಪಾಲಿಸದೆ ಇರುವ ಕೇಂದ್ರ ವಿಭಾಗದ ಪಬ್, ಮತ್ತು ಬಾರ್ ಆ್ಯಂಡ್ ರೆಸ್ಟೋಂರೆಟ್ ಗಳಿಗೆ ಮಿಡ್ ನೈಟ್‌ನಲ್ಲಿ ದಾಳಿ ನಡೆಸಿ ಕೇಸ್ ಬುಕ್ ಮಾಡ್ತಿದ್ದಾರೆ. ಚರ್ಚ್ ಸ್ಟಿಟ್ ನಲ್ಲಿರುವ ಚಿನ್ ಲುಂಗ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಅಶೋಕ್ ನಗರದಲ್ಲಿರುವ ಯಶ್ವಸಿನಿ ರೆಸ್ಟೋರೆಂಟ್, ಈಶ್ವರಿ ಬಾರ್ ರೆಸ್ಟೋರೆಂಟ್ ಗಳ ವಿರುದ್ಧ ಮಿಡ್ ನೈಟ್ ನಲ್ಲಿ ದಾಳಿ ನಡೆಸಿ ಕೇಸ್ ಬುಕ್ ಮಾಡಿಸಿದ್ದಾರೆ.
ಇನ್ನು ಕಳೆ ಎರಡು ತಿಂಗಳಲ್ಲಿ ಅಶೋಕ್ ನಗರ,ಕಬ್ಬನ್ ಪಾರ್ಕ್, ವ್ಯಾಪ್ತಿಯಲ್ಲಿ ಅಪ್ರಾಪ್ತರಿಗೆ ಮಧ್ಯ ಸರಬರಾಜು ಮಾಡುತ್ತಿದ್ದ 13 ಪಬ್ ಮತ್ತು ಬಾರ್ಗಳ ವಿರುದ್ದ ಪ್ರಕರಣ ದಾಖಲಿಸಿ ಬಿಬಿಎಂಪಿ ಮತ್ತು ಅಬಕಾರಿ ಇಲಾಖೆಗೆ ಲೈಸನ್ಸ್ ರದ್ದು ಪಡಿಸುವಂತೆ ವರದಿ ನೀಡಿದ್ದಾರೆ.
PublicNext
20/09/2022 08:51 pm