ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಗಿ ತುಂಬುವ ಗೋಣಿ ಚೀಲದಲ್ಲಿ ಹಣ ಮಾಡಿದ್ರಾ ಅಧಿಕಾರಿಗಳು

ಬೆಂಗಳೂರು: ರೈತರಿಗೆ ಅನುಕೂಲ ಆಗ್ಲಿ ಅಂತ ಸರ್ಕಾರವೇ ರೈತರಿಂದ ರಾಗಿ ಖರೀದಿಗೆ ಮುಂದಾಗಿದೆ. ಈ ರಾಗಿ ಖರೀದಿಗೆ ಬೇಕಾದ ಗೋಣಿ ಚೀಲದಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ ಎಂದು ಆರೋಪ ಕೇಳಿ ಬಂದಿದೆ. ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಶಿವಾನಂದ ಕಪಾಶಿ, ಕೆಎಎಸ್ ಅಧಿಕಾರಿ ಸೋಮಣ್ಣವರ್, ಹಾಗು ವೀರೇಶ್ ಕುಮಾರ್ ಗಂಭೀರ ಆರೋಪ ಕೇಳಿ ಬಂದಿದೆ.

ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಾಮಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಪ್ರತಿ ಗೋಣಿ ಚೀಲಗಳ ಖರೀದಿಗೆ ಸರ್ಕಾರ 22 ರೂ ನಿಗಧಿ ಮಾಡಿದೆ.ಈ ಬಾರಿ ಜೆಮ್ ಪೋರ್ಟಲ್ ಗಳ ಮೂಲಕ ಚೀಲ ಖರೀದಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು.

ಆದ್ರೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಬಹುದೊಡ್ಡ ಗೋಲ್ಮಾಲ್ ನಡೆದಿದ್ದು,ಟೆಂಡರ್ ನೀಡುವಿಕೆಯಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆಸಿದ್ದಾರೆ. ಟೆಂಡರ್ ಸಮಿತಿ ರಚಿಸದೆ ಏಕಪಕ್ಷೀಯವಾಗಿ ಹಿಂದಿನ ಎಂಡಿ ನಿರ್ಧಾರ ಮಾಡಿ ತಮಗೆ ಬೇಕಾದವರಿಗೆ ಟೆಂಡರ್ ಹಾಕಿಸಿ ಅಕ್ರಮ ಎಸಗಲಾಗಿದ್ದಾರೆ ಎಂದು ದೂರಿದ್ದಾರೆ.

Edited By : Manjunath H D
PublicNext

PublicNext

19/09/2022 10:20 pm

Cinque Terre

34.66 K

Cinque Terre

0