ಯಶವಂತಪುರ: ರಾತ್ರಿಯಾಯ್ತು ಅಂದ್ರೆ ಫೀಲ್ಡಿಗಿಳಿಯುವ ನಿಶಾಚರಿ ಕಳ್ಳರು ಹಗಲು ಆಟೋ ಚಲಾಯಿಸ್ತಾರೆ ಮತ್ತೆ ರಾತ್ರಿ ಅದೇ ಆಟೋದಲ್ಲಿ ಹೋಗಿ ಕಳ್ಳತನ ಮಾಡ್ತಾರೆ.
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತಿಕೆರೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
ಮತ್ತಿಕೆರೆಯ ಆಲ್ ಮಕ್ಕೀಸ್ ರೆಸ್ಟೋರೆಂಟ್ ನಲ್ಲಿ ರಾತ್ರಿ ಆಟೋದಲ್ಲಿ ಬಂದು ಶಟರ್ ಮುರಿದು ಕಳ್ಳತನ ಮಾಡಿದ್ದಾರೆ. ರೆಸ್ಟೋರೆಂಟ್ ನಲ್ಲಿದ್ದ 28 ಸಾವಿರ ಹಣ ಕದ್ದು ಪರಾರಿಯಾಗಿದ್ದಾರೆ. ಆಟೋವನ್ನ ಅಡ್ಡ ಇಟ್ಟು ಶಟರ್ ಮುರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ನಿಶಾಚರ ಕಳ್ಳರಿಗಾಗಿ
ಯಶವಂತಪುರ ಪೊಲೀಸ್ ಬಲೆ ಬೀಸಿದ್ದಾರೆ.
PublicNext
14/09/2022 09:47 pm