ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಂಡತಿಯನ್ನು ನೋಡಲು ಬಂದ ಕಳ್ಳ ಕದ್ದ ಮಾಲು ಸಮೇತ ಪೊಲೀಸ್ರಿಗೆ ಶರಣಾದ

ಬೆಂಗಳೂರು: ಮನೆ ಕಳ್ಳತನ ಮಾಡಿ ನೇಪಾಳಕ್ಕೆ ಎಸ್ಕೇಪ್ ಆಗಿದ್ದವನು ಹೆಂಡತಿಗಾಗಿ ತಾನೇ ಬಂದು ಪೊಲೀಸ್ರ ಮುಂದೆ ಶರಣಾಗಿದ್ದಾನೆ‌.

ಕಳ್ಳತನ ಕೇಸ್ ನಲ್ಲಿ ಕಳ್ಳನ ಹೆಂಡತಿಯನ್ನ ಪೊಲೀಸರು ವಿಚಾರಣೆಗೆ ಕರೆದಿದ್ದೆ ತಡ ಕದ್ದ ಮಾಲಿನ ಸಮೇತ ಬಂದು ಶರಣಾಗಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಲೆ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳು ನೇಪಾಳದಿಂದ ಬಂದು ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡ್ತಿದ್ರು.ಸುರೇಂದ್ರ @ ಗೂರ್ಖಾ, ಗಣೇಶ್ @ ಕಡ್ಕ ಬಂಧಿತ ಆರೋಪಿಗಳಾಗಿದ್ದು, 12 ವರ್ಷದಿಂದ ಬೆಂಗಳೂರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ರು. ಬೀಗ ಹಾಕಿದ್ದ ಮನೆಯನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು.

ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಇದೇ ರೀತಿ ಕಳ್ಳತನ ಮಾಡಿದ್ರು. ಮನೆಯ ಅಕ್ಕ ಪಕ್ಕದ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಚಂದ್ರಾ ಲೇಔಟ್ ಪೊಲೀಸರಿಗೆ ಸ್ಕೂಟಿ ನೀಡಿದ ಸುಳಿವಿನ ಮೇರೆಗೆ ಆರೋಪಿಗಳ ಗುರುತು ಪತ್ತೆಮಾಡಿದ್ರು. ಸ್ಕೂಟಿ ಬೆನ್ನತ್ತಿದ್ದ ಪೊಲೀಸರಿಗೆ ಗಣೇಶನ ಮನೆ ವಿಳಾಸ ಪತ್ತೆಯಾಗಿತ್ತು. ಆದ್ರೆ ಅದಾಗ್ಲೆ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ರು.

ಈ ವೇಳೆ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಆರೋಪಿ ಗಣೇಶ್‌ನ ಹೆಂಡತಿಯ ವಿಚಾರಣೆ ಮಾಡಿದ್ರು. ವಿಚಾರಣೆ ಮಾಡ್ತಿರೋದು ತಿಳಿಯುತ್ತಿದ್ದಂತೆ ಓಡೋಡಿ ಪೊಲೀಸರ ಬಳಿ ಬಂದಿದ್ದ ಗಣೇಶ ಕದ್ದ ಎಲ್ಲಾ ಮಾಲುಗಳನ್ನ ಪೊಲೀಸ್ರಿಗೆ ಒಪ್ಪಿಸಿ ಶರಣಾಗಿದ್ದಾನೆ.

Edited By : Nagaraj Tulugeri
PublicNext

PublicNext

22/09/2022 01:18 pm

Cinque Terre

11.86 K

Cinque Terre

1