ಬೆಂಗಳೂರು: ಪ್ಯಾಕರ್ಸ್-ಮೂವರ್ಸ್ ಕಂಪನಿ ಹೆಸರಿನಲ್ಲಿ ಸುಲಿಗೆ; ಮೂವರು ಖದೀಮರ ಸೆರೆ
ಬೆಂಗಳೂರು: ಈಶಾನ್ಯ ವಿಭಾಗದ ಸಿಇಎನ್ ಯಲಹಂಕ ಪೊಲೀಸರು ಪ್ರತಿಷ್ಟಿತ ಕಂಪನಿಗಳ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ವಂಚಿಸುತ್ತಿದ್ದ ಬ್ರಹ್ಮದೇವ್ ಯಾದವ್, ಮುಕೇಶ್ ಕುಮಾರ್ ಯಾದವ್ ಹಾಗೂ ವಿಜಯ್ ಕುಮಾರ್ ಯಾದವ್ ಎಂಬವರನ್ನು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬರು ಬೆಂಗಳೂರಿನಿಂದ ಸಾಗರಕ್ಕೆ ಬೈಕ್ ಸಾಗಿಸಲು ನಕಲಿ ಪ್ಯಾಕರ್ಸ್ & ಮೂವರ್ಸ್
ವೆಬ್‌ಸೈಟ್ ನಂಬಿ ಆರೋಪಿಗಳನ್ನು ಸಂಪರ್ಕಿಸಿದ್ದರು. ಒಂದು ಸಾವಿರ ಮುಂಗಡ ಹಣ ಪಡೆದು ದ್ವಿಚಕ್ರ ವಾಹನ ಪಿಕ್ ಮಾಡಿದ್ದರು. ಮಾರನೇ ದಿನ ಡೆಲಿವರಿಗೆ ನೀಡಬೇಕಾದ 8 ಸಾವಿರ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಬೈಕ್ ಮಾಲೀಕ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಖದೀಮರನ್ನು ಬಂಧಿಸಿ 1 ಬೈಕ್, 4 ಮೊಬೈಲ್ ವಶಕ್ಕೆ ಪಡೆದಿದ್ದಾರೆ.
- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ
PublicNext
18/09/2022 07:41 pm